



ಕಳಸ ಲೈವ್ ವರದಿ
ಕಳಸ ರವಿ ರೈ ಅವರ ಆಸರೆ ಫೌಂಡೇಶನ್ ವತಿಯಿಂದ ಸಾರ್ವಜನಿಕ ಸೇವೆಗಾಗಿ ಕಳಸ ಪಟ್ಟಣಕ್ಕೆ ಅಂಬ್ಯುಲೆನ್ಸ್ ನೀಡುವ ಕಾರ್ಯಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಮಣಿಕಂಠ ಮಹಿಮೆ ನಾಟಕ ಭಕ್ತಿ ಕಡಲಲ್ಲಿ ತೇಲುವಂತೆ ಮಾಡಿತು.
ಕಳಸ ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ ನಡೆದ ವಿಜಯಕುಮಾರ್ ಕೋಡಿಯಲ್ ಬೈಲ್ರವರ ಕಲಾ ಸಂಗಮದಿಂದ ನಡೆದ 34ನೇ ಪ್ರಯೋಗ ನೆರೆದ ಸಾವಿರಾರು ಜನರ ಮನಸ್ಸನ್ನು ಗೆದ್ದಿತು.
ತುಳು ರಂಗಭೂಮಿಯಲ್ಲಿ ಹಲವು ಹೊಸತನಗಳನ್ನು ಪ್ರದರ್ಶಿಸಿಸಿ ಪ್ರಶಂಸೆಗೆ ಪಾತ್ರವಾಯಿತು. ಆ ಕಡೆಯಿಂದ ಬಂದು ಈ ಕಡೆ ಹೋಗೋ ನಾಟಕಗಳಿಂದ ಏಕತಾನತೆ ಮೂಡಿದ್ದ ರಂಗಭೂಮಿಗೆ ಹೀಗೂ ಮಾಡಬಹುದು ಎಂಬುದನ್ನು ಶಿವಧೂತೆ ಗುಳಿಗೆ ನಾಟಕದಲ್ಲಿ ಇರುವಂತೆ ಇಲ್ಲಿಯೂ ತೋರಿಸಿದ್ದಾರೆ.
ಅಯ್ಯಪ್ಪನ ಸಂಪೂರ್ಣ ಕಥೆಯನ್ನು ಒಂದು ಹೊಸ, ವಿಭಿನ್ನ, ವಿನೂತನ, ಭಕ್ತಿ ಪ್ರಧಾನ್ಯತೆ ಹೊಂದಿರುವ ಮಣಿಕಂಠ ಮಹಿಮೆ ನಾಟಕವು ಎಲ್ಲರ ಮನಸ್ಸನ್ನು ಗೆದ್ದು, ಬರುವ ವರ್ಷ ರವಿ ರೈ ಕಳಸದ ಕಲಾಭಿಮಾನಿಗಳಿಗೆ ಇನ್ಯಾವ ನಾಟಕದ ರಸದೌತನ ನೀಡುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.
