

ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥವನ್ನು ಸ್ವಾಗತಿಸಲಾಯಿತು.
ಕಳಸ ದೇವಸ್ಥಾನ ಬಳಿ ಬಂದ ಜಾಥವನ್ನು ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಉಪಾಧ್ಯಕ್ಷ ರಂಗನಾಥ್, ಸದಸ್ಯೆ ಸುಜಯ ಸದಾನಂದ, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ಸೇರಿದಂತೆ ಅಂಬೇಡ್ಕರ್ ವಸತಿ ಶಾಲೆ, ಕಳಸ ಕರ್ನಾಟಕ ಪಬ್ಲಿಕ್ ಶಾಲೆ, ಪ್ರಬೋಧಿನಿ ವಿದ್ಯಾ ಕೇಂದ್ರದ ವಿಧ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸ್ವಾಗತಿಸಿದರು.
ಕಳಸ ಮುಖ್ಯ ರಸ್ತೆಯ ಮುಖಾಂತರ ಕಳಸ ತಾಲ್ಲೂಕು ಕಚೇರಿ ವರೆಗೆ ಮೆರವಣಿಗೆಯೊಂದಿಗೆ ಜಾಥವು ಸಾಗಿ ಬಂತು.




