

ಕಳಸ ಲೈವ್ ವರದಿ
ಕಳಸ ದೇವರಗುಡ್ಡ ಆಶ್ರಮದ ಬಳಿ ವೇಗವಾಗಿ ಬಂದ ನೀರಿನ ಟ್ಯಾಂಕರ್ ಹೊತ್ತ ಟ್ರ್ಯಾಕ್ಟರ್ ಗುದ್ದಿದ ಘಟನೆ ನಡೆದಿದೆ.
ರಸ್ತೆ ರಿಪೇರಿಗೆ ಬಂದಿರುವ ನೀರಿನ ಟ್ಯಾಂಕರ್ ಹೊತ್ತ ಟ್ರ್ಯಾಕ್ಟರ್ ವೇಗವಾಗಿ ಸಂಸೆ ಕಡೆಯಿಂದ ಬಂದು ದೇವರಗುಡ್ಡ ಆಶ್ರಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ನಿಂದ ನೀರಿನ ಟ್ಯಾಂಕರ್ ಬೇರ್ಪಟ್ಟು ಪಲ್ಟಿಯಾಗಿ ಕಳಸ ಕಡೆಯಿಂದ ಸಂಸೆ ಕಡೆ ಹೋಗುತ್ತಿದ್ದ ಪಿಕಪ್ ಗೆ ಗುದ್ದಿದೆ.
ಕ್ಷಣ ಮಾತ್ರದಲ್ಲಿ ಸಂಭವಿಸಬೇಕಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.ಅದೃಷ್ಟವಶಾತ್ ಯಾವುದೇ ತೊಂದರೆಯಾಗದೆ ಚಾಲಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
