ಕಳಸ ಲೈವ್ ವರದಿ
ರಾಜ್ಯಸಭಾ ಚುನಾವಣಾ ಫಲಿತಾಂಶದ ಬಳಿಕ ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣದ ವಿರುದ್ದ ಕಳಸ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ಕೆ.ಮಹೇಶ್ ಬಸರಿಕಲ್ ಪ್ರತಿಕ್ರೀಯೆ ನೀಡಿದ್ದಾರೆ.ಪಾಕಿಸ್ತಾನ ಜಿಂದಾಬಾದ್ ಅಂದಿರೋದು ಮಹಾ ಅಪರಾಧ ಇದನ್ನು ನಾವು ಖಂಡಿಸುತ್ತೇವೆ ಅಲ್ಲದೆ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಒಕ್ಕೊರಳಿನಿಂದ ವಿರೋಧಿಸದೆ ಇದ್ದರೆ ಮುಂದಿನ ದಿನಗಳಲ್ಲಿ ದೇಶದ್ರೋಹಿಗಳು ತಮ್ಮ ತಮ್ಮ ಮನೆ ಪಕ್ಕದಲ್ಲೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲು ಹವಣಿಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆಗಳನ್ನು ಕೂಗ್ತಾರೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಬಂದರೆ ಇಡೀ ಭಾರತ ದೇಶ ಪಾಕಿಸ್ತಾನ ಆಗುವುದರಲ್ಲಿ ಅನುಮಾನವೇ ಇಲ್ಲ, ದೇಶ ವಿರೋಧಿ ಚಟುವಟಿಕೆ ಮಾಡಿದರೆ ಮೆರವಣಿಗೆ, ಅದನ್ನು ಪ್ರತಿಭಟಿಸಿದರೆ ಬಂಧನ, ಇದು ಕಾಂಗ್ರೆಸ್ ಸಂಸ್ಕøತಿ ಆಗಿದೆ ಎಂದು ತಿಳಿಸಿದ್ದಾರೆ.
