

ಕಳಸ ಲೈವ್ ವರದಿ
ಸಾಹಿತಿ ಬರಹಗಾರ ವೈ ಪ್ರೇಮ್ ಕುಮಾರ್ ಅವರಿಗೆ ಮಾ 30 ರಂದು ಮೂಡಿಗೆರೆಯಲ್ಲಿ ನಡೆದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೈ ಪ್ರೇಮ್ ಕುಮಾರ್ ಅವರು ಸಾಕಷ್ಟು ಕಥೆ, ಕವನಗಳನ್ನು ಬರೆದು ರಾಜ್ಯ ಮಟ್ಟದಲ್ಲೂ ಹೆಸರು ಮಾಡಿದ್ದರು. ಇತ್ತೀಚೆಗಷ್ಟೆ ಹೇರೆತ್ತು ಎಂಬ ಕಾದಂಬರಿ, ಮೂಡಲ ಮೌನ ಕೃತಿಯನ್ನು ಬಿಡುಗಡೆ ಮಾಡಿದ್ದರು. ಅಲ್ಲದೆ ಇನ್ನೂ ಆರು ಪುಸ್ತಕಗಳು ಬಿಡುಗಡೆಯ ಹಂತದಲ್ಲಿವೆ.
ವೈ ಪ್ರೇಮ್ ಕುಮಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಮಹಿಳಾ ಘಟಕ ಅಧ್ಯಕ್ಷೆ ಮಮ್ತಾಜ್ ಬೇಗಂ, ಹೋಬಳಿ ಅಧ್ಯಕ್ಷ ಶೇಖರ್ ಶೆಟ್ಟಿ, ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ರಜಿತ್ ಕೆಳಗೂರು, ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಉಪಾಧ್ಯಕ್ಷೆ ಸುಜಯ ಸದಾನಂದ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
