ಕಳಸ ಲೈವ್ ವರದಿ
ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಂಬೇಡ್ಕರ್ ಅವರ ಪಾತ್ರ ಅನನ್ಯವಾದದ್ದು, ಅವರ ಸಾಮಾಜಿಕ ಚಳುವಳಿಗಳಿಂದ ಭಾರತದಲ್ಲಿ ಸಮಸಮಾಜದ ನಿರ್ಮಾಣಕ್ಕೆ ಕಾರಣವಾಯಿತು ಎಂದು ಕಳಸ ಜೆಸಿಐ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಹೇಳಿದರು.
ತಾಲ್ಲೂಕಿನ ಭದ್ರಕಾಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳಸ ಜೆಸಿಐ ಸಂಸ್ಥೆ ವತಿಯಿಂದ ಸಂವಿದಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಅವರ ಸಂವಿದಾನದ ಮೂಲಕ ಕೊಟ್ಟ ಸವಲತ್ತುಗಳು ನಿರ್ದಿಷ್ಟ ಸಮುದಾಯಗಳಿಗೆ ಸೀಮಿತವಾಗದೆ ಎಲ್ಲಾ ವರ್ಗದ ಜನರ ಅಭಿವೃದ್ಧಿಗೂ ಕಾರಣವಾಗಿದೆ ಅಂಬೇಡ್ಕರ್ ಅವರ ಜೀವನ ನಮಗೆಲ್ಲ ಮಾದರಿಯಾಗಿದೆ ಎಂದು ಹೇಳಿದರು.
ಜೆಸಿಐ ಸಂಸ್ಥೆ ವಲಯ 14 ರ ಅಭಿವೃದ್ದಿ ಹಾಗು ಬೆಳೆವಣಿಗೆಯ ನಿರ್ದೇಶಕರಾದ ಜೇಸಿ ಪ್ರಶಾಂತ್ ಹೆಚ್ ಆರ್, ಶಾಲಾ ಮುಖ್ಯ ಶಿಕ್ಷಕಿ ಅಶ್ವಿನಿ ಹಾಗು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಹಾಗು ಕಳಸ ಜೆಸಿಐ ನ ಕಾರ್ಯದರ್ಶಿಗಳಾದ ಜೇಸಿ ಸುಧಾಕರ್, ಮುರುಳಿ, ಜಯಪ್ರಕಾಶ್, ನಜೀರ್ ಇದ್ದರು.