
ಕಳಸ ಲೈವ್ ವರದಿ
ಕಳಸ ತಾಲೂಕಿನ ಭದ್ರಕಾಳಿ ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳಸ ಜೆಸಿಐ ಸಂಸ್ಥೆ ವತಿಯಿಂದ “ನನ್ನ ಕನಸಿನ ಶಾಲೆ” ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಅಗತ್ಯ ದುರಸ್ತಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಸಿಐ ಕಳಸ ಸಂಸ್ಥೆಯ ಅಧ್ಯಕ್ಷರಾದ ಜೇಸಿ ಶ್ರೀಕಾಂತ್ ಗ್ರಾಮೀಣ ಭಾಗದ ಶಾಲೆಯನ್ನು ದತ್ತು ಪಡೆದು ಸಂಸ್ಥೆ ಹಾಗು ದಾನಿಗಳ ವತಿಯಿಂದ ಅಭಿವೃದ್ದಿ ಪಡಿಸುವ ಯೋಜನೆಗೆ ಚಾಲನೆ ನೀಡಿದ್ದು ಸಂತಸದ ವಿಚಾರವಾಗಿದೆ. ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜೆಸಿಐ ಸಂಸ್ಥೆ ವಲಯ 14 ರ ಅಭಿವೃದ್ದಿ ಹಾಗು ಬೆಳೆವಣಿಗೆಯ ನಿರ್ದೇಶಕರಾದ ಜೇಸಿ ಪ್ರಶಾಂತ್ ಹೆಚ್ ಆರ್ ಜೆಸಿಐ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿಯಿಂದ ತೀರ ಹಿಂದುಳಿದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ನನ್ನ ಕನಸಿನ ಶಾಲೆ ಎಂಬ ಕಾರ್ಯಕ್ರಮವನ್ನು ಪರಿಚಯಿಸಿದೆ ಈಗಾಗಲೇ ವಲಯದಲ್ಲಿ 8 ಘಟಕಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಅಶ್ವಿನಿ ಹಾಗು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಹಾಗು ಕಳಸ ಜೆಸಿಐ ನ ಕಾರ್ಯದರ್ಶಿಗಳಾದ ಜೇಸಿ ಸುಧಾಕರ್, ಮುರುಳಿ, ಜಯಪ್ರಕಾಶ್, ನಜೀರ್ ಇದ್ದರು.