
ಕಳಸ ಲೈವ್ ವರದಿ
ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಗಂಗನಗುಡಿಗೆ ರವಿಚಂದ್ರ ಸೇರಿ ಬಿಜೆಪಿಯ ಕೆಲ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಗುರುವಾರ ಸೇರ್ಪಡೆಗೊಂಡರು.
ರವಿಚಂದ್ರ ಜೊತೆ, ರವಿ, ಮಂಜುನಾಥ್ ಸೇರಿದಂತೆ ಅವರ ಸಂಘಡಿಗರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಮಾಜಿ ತಾ.ಪಂ ಸದಸ್ಯರಾದ, ಹಿತ್ಲುಮಕ್ಕಿ ರಾಜೇಂದ್ರ ಪ್ರಸಾದ್, ಮಹಮ್ಮದ್ ರಫೀಕ್, ಕಳಸ ಗ್ರಾ.ಪಂ ಸದಸ್ಯ ವೀರೇಂದ್ರ ಜೈನ್, ಸುದೀರ್ ಇತರರು ಇದ್ದರು.

