
ಕಳಸ ಲೈವ್ ವರದಿ
ಇಲ್ಲಿಯ ಶ್ರೀ ಹೊಸದೇವರ ಚಾವಡಿ ದೈವಸ್ಥಾನದಲ್ಲಿ ಮಂಗಳವಾರ ಮುದ್ರೆ ಪೂಜೆ ನಡೆಯಿತು.
ವರ್ಷ ಬಿಟ್ಟು ವರ್ಷ ಮಾರಿ ಪೂಜೆ ಹಾಗೂ ದೈವದ ನೇಮೋತ್ಸವ ನಡೆಯುತ್ತಿತ್ತು ಆದರೆ ಈ ವರ್ಷ ನೇಮೋತ್ಸವ ಇಲ್ಲದಿದ್ದ ಕಾರಣ ಮುದ್ರೆ ಪೂಜೆಯನ್ನು ನಡೆಸಲಾಯಿತು.

ಮಂಗಳವಾರ ಬೆಳಿಗ್ಗೆ ದೈವದ ಬಂಡಾರವು ಬಂಡಾರ ಮನೆಯಿಂದ ಹೊರಟು ಕಲಶೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಕಲಶೇಶ್ವರನ ಅಪ್ಪಣೆಯೊಂದಿಗೆ ಹೊಸದೇವರ ಚಾವಡಿಗೆ ತೆರಳಿ ಅಲ್ಲಿ ಬಂಡಾರವನ್ನು ಒಕ್ಕಲು ಮಾಡಲಾಯಿತು.
ಸಂಜೆ 5.30ಕ್ಕೆ ಪೂಜೆಯು ಆರಂಭವಾಗಿ 7 ಗಂಟೆಗೆ ಹೊಸದೇವರ ಚಾವಡಿಯಲ್ಲಿ ಹಾಗೂ ಬೆಳ್ಳಾರಮ್ಮ ದೇವಸ್ಥಾನದಲಿ ದೈವ ಗಣ ನಡೆಯಿತು. ರಾತ್ರಿ ಗಣಕಲಾವಧಿಯೇ ಅಂತ್ಯಕ್ಕೆ ಭಂಡಾರವು ಗುತ್ಯಮ್ಮ ದೇವಸ್ಥಾನಕ್ಕೆ ಬಂದು ಅಲ್ಲಿ ಮಹಾಮಂಗಳಾರತಿ ಆಗಿ ವಾಪಸ್ಸು ಭಂಡಾರದ ಮನೆಗೆ ತೆರಳಿತು.

