

ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು ತಂಪಾದ ವಾತಾವರಣ ಉಂಟಾಗಿದೆ.
ಈ ಭಾರಿ ಬಿಸಿಲಿನ ಝಲಕ್ಕೆ ಬೆಂಡಾಗಿದ್ದ ಜನ ಯಾವಾಗ ಮಳೆ ಬರುತ್ತೋ ಎಂದು ಆಕಾಶ ನೋಡುವಂತಾಗಿತ್ತು.
ಆದರೆ ಇದಕ್ಕೆಲ್ಲ ತಕ್ಕ ಉತ್ತರವನ್ನು ಕಳೆದ ಒಂದು ವಾರದಿಂದ ಕೊಡುತ್ತಿದ್ದು, ಮಳೆಯ ಹನಿಗಳು ಇಳೆಗೆ ಇಳಿಯಲಾರಂಬಿಸಿದ್ದು, ಇಳೆ ತಂಪಾಗಿದ್ದು ಕಳಸ ಈಗ ಕೂಲ್ ಕೂಲ್ ಆಗಿದೆ.ಇಡೀ ಪರಿಸರ ತಂಪಾಗಿ ಮೈಯೆಲ್ಲ ಬೆಚ್ಚಗೆ ಹಂಬಲಿಸುವಂತಾಗಿದೆ.
ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ಮಳೆರಾಯನ ಆಗಮನವಾಗುತ್ತಿತ್ತು ಆದರೆ ಭಾನುವಾರ ಮಧ್ಯಾಹ್ನವೇ ತನ್ನ ದಿನಚರಿ ಪ್ರಾರಂಬಿಸಿದ್ದು, ಸಂಜೆ ತನಕವೂ ಮಳೆ ಮುಂದುವರೆಯಿತು. ರಾಜ್ಯ ಹೊರ ರಾಜ್ಯಗಳಿಂದ ಬಂದಿರುವ ಪ್ರವಾಸಿಗರು ಮಲೆನಾಡಿನ ಮಳೆಗಾಲದ ನೈಜ್ಯ ಅನುಭವವನ್ನು ಪಡೆದರು.ಅತ್ತ ಬೆಚ್ಚಗೆ ಮಲಗಿದ್ದ ಜಿಗಣೆಗಳು ಹೊರ ಬಂದು ರಕ್ತ ಹೀರಲು ಪ್ರಾರಂಬಿಸಿದರೆ, ಇತ್ತ ಮೂಲೆ ಸೇರಿದ್ದ ಛತ್ರಿ ರೈನ್ ಕೋಟ್ ಗಳು ಹೊರ ಬಂದಿವೆ.


