

ಕಳಸ ಲೈವ್ ವರದಿ
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಳಸ ತಾಲೂಕಿನ ಹೊರನಾಡು ಕ್ಷೇತ್ರಕ್ಕೆ ಬೇಟಿ ನೀಡಿ ತಾಯಿ ಅನ್ನಪೂರ್ಣೇಶ್ವರಿಯ ದರ್ಶನ ಪಡೆದರು.
ಪತ್ನಿ ಮಗ, ಮಗಳೊಂದಿಗೆ ಮಂಗಳವಾರ ಹೊರನಾಡಿಗೆ ಬೇಟಿ ನೀಡಿ ದೇವರ ದರ್ಶನ ಮಾಡಿ ಅನ್ನಪೂರ್ಣೇಶ್ವರಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದರು.
ದೇವಸ್ಥಾನದ ವತಿಯಿಂದ ರಿಷಬ್ ಶೆಟ್ಟಿ ದಂಪತಿಗಳನ್ನು ಸ್ವಾಗತಿಸಲಾಯಿತು.ದೇವಸ್ಥಾನದ ಟ್ರಸ್ಟಿ ರಾಜಗೋಪಾಲ ಜೋಷಿ ದಂಪತಿಗಳಿಗೆ ಶಾಲು ಹೊದಿಸಿ ಪ್ರಸಾದ ನೀಡಿದರು.


