
ಕಳಸ ಲೈವ್ ವರದಿ
ಸಾಹಿತ್ಯದ ನಿಜವಾದ ಅರ್ಥವನ್ನು ಪಡೆಯಬೇಕಾದರೆ ಸಾಹಿತಿಗಳ ಪುಸ್ತಕ ಬಿಡುಗಡೆ ಮಾಡಿ ಲೇಖಕರನ್ನು ಪ್ರೋತ್ಸಾಹಿಸಬೇಕು’ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಜೋಷಿ ಹೇಳಿದರು.
ಕಳಸ ಮಕ್ಕಿಮನೆಯಲ್ಲಿ ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ವತಿಯಿಂದ ನಡೆದ “ಮುಂಗಾರು ಸಾಹಿತ್ಯ ಸಂಜೆ ” ಕಾರ್ಯಕ್ರಮ ಹಾಗೂ ಗೀತಾ ಮಕ್ಕಿಮನೆ ಇವರ ಭಾವಬಿಂಬ ಕವನ ಸಂಕಲನ ಮತ್ತು ಚಂಪಕ ರಾಘವೇಂದ್ರ ಇವರ ಹಾಸ್ಯ ಲೇಖನ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಕಳಸದಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ಹೆಚ್ಚಾಗುತ್ತಿದ್ದಂತೆ ಬರಹಗಾರರ ಪುಸ್ತಕಗಳು ಕೂಡ ಸಾಲು ಸಾಲಾಗಿ ಬಿಡುಗಡೆಗೊಳ್ಳುತ್ತಿದೆ.ಇಂತಹ ಬರಹಗಾರರಿಗೋಸ್ಕರನೇ ಕಳಸ ಮಹಿಳಾ ಘಟಕ ಕಾರ್ಯಕ್ರಮ ನಡೆಸಿ ಪ್ರೋತ್ಸಾಹಿಸುತ್ತಿರುವುದು ಸಾಹಿತ್ಯಕ್ಕೆ ಪೂರಕವಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸೂರಿ ಶ್ರೀನಿವಾಸ್ ರವರು ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿ… ರಾಜ್ಯದಲ್ಲೇ ಕಳಸ ಮಹಿಳಾ ಘಟಕ ವಿಭಿನ್ನ ವಿಶಿಷ್ಟ ಸಾಹಿತ್ಯ ಕಾರ್ಯಕ್ರಮ ನಡೆಸುತ್ತಿದ್ದು ಅತೀ ಹೆಚ್ಚಿನ ಸದಸ್ಯರನ್ನು ಸಂಘಟಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಮ್ ಮಾತನಾಡಿ ಎಲ್ಲರ ಸಹಕಾರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಇಂಥಹ ಯಶಸ್ವಿ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿದ್ದು ಮುಂದಿನ ದಿನಗಳಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಟ್ಟು ಇನ್ನೂ ಹೆಚ್ಚಿನ ಹೊಸತನದಲ್ಲಿ ಸಾಹಿತ್ಯ ಚಟುವಟಿಕೆ ನಡೆಯುವಂತಾಗಲಿ ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಳಸ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಅ. ರಾ. ಸತೀಶ್ಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಸ್. ವೆಂಕಟೇಶ್, ಜಿಲ್ಲಾ ಸಂಚಾಲಕ ಪಾಂಡುರಂಗ, ಅನ್ನಪೂರ್ಣೇಶ್ವರಿ ಬಸ್ ಮಾಲೀಕರಾದ ಕೆ. ಕೆ. ಬಾಲಕೃಷ್ಣ ಭಟ್, ಪತ್ರಕರ್ತ ಗೋಪಾಲ್ ಯಡಗೆರೆ, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಿ. ಕೆ. ಮಂಜಪ್ಪಯ್ಯ, ಘಟಕದ ಗೌರವಾಧ್ಯಕ್ಷೆ ಮನೋರಾಧಿನಿ ಧರಣೇಂದ್ರ, ಹೋಬಳಿ ಘಟಕದ ಅಧ್ಯಕ್ಷರಾದ ಶೇಖರ ಶೆಟ್ಟಿ, ಸಾಹಿತಿಗಳಾದ ವೈ. ಪ್ರೇಮ್ ಕುಮಾರ್ ಉಪಸ್ಥಿತರಿದ್ದರು. ಸಿಂಧೂಪ್ರಭು ಮತ್ತು ಲೀಲಾ ಶ್ರೀಕಾಂತ್ ಪ್ರಾರ್ಥನೆ ಮಾಡಿ, ಕಲ್ಪನಾ ಅಜಿತ್ ನಿರೂಪಿಸಿದರು, ಸುಮನಾ ಜಯರಾಜ್ ಸ್ವಾಗತ, ಡಾ. ಜಾನಕಿ ಸುಂದರೇಶ್ ಲೇಖಕಿಯರ ಪರಿಚಯ ಮಾಡಿ ಸುಜಯಾ ಸದಾನಂದ ವಂದಿಸಿದರು.