ಕಳಸ ಲೈವ್ ವರದಿ
ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತನೂಡಿ ಗ್ರಾಮ ಅಳುಗೋಡು, ಕಾಳಿಪಾಳು, ಬಿಳುಗೂರು ಗ್ರಾಮಕ್ಕೆ ಕಾಡಾನೆ ನುಗ್ಗಿ ಅಪಾರ ಪ್ರಮಾಣದ ಕೃಷಿಯನ್ನು ನಾಶ ಪಡಿಸಿದೆ.
ಅಳಗೋಡು ಗ್ರಾಮದ ವಾಸುದೇವ, ಎಕೆ.ದೇವಪ್ಪ, ಎ.ಕೆ.ಪರಮೇಶ್ವರ್ ಕಾಳಿಪಾಳಿನ ಉಮೇಶ್ ಪೂಜಾರಿ ಇವರ ಜಮೀನುಗಳಿಗೆ ನುಗ್ಗಿದ ಕಾಡಾನೆ ಅಡಕೆ, ಬಾಳೆ, ಕಾಫಿ ಗಿಡಗಳನ್ನು ನಾಶ ಪಡಿಸಿದೆ.
ಈ ಗ್ರಾಮಕ್ಕೆ ಪದೇ ಪದೇ ಕಾಡಾನೆಗಳು ನುಗ್ಗಿ ಅಪಾರ ಪ್ರಮಾಣದ ಕೃಷಿ ಭೂಮಿಯನ್ನು ಹಾಳು ಮಾಡುತ್ತಿವೆ. ಕಾರ್ಮಿಕರು ತೋಟಕ್ಕೆ ಕೂಡ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆನೆ ಸ್ಥಳಾಂತರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಆನೆ ಉಪಟಳಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.



