
ಕಳಸ ಲೈವ್ ವರದಿ
ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಸೌತೆಕುಣಿ ಕೆ.ಎಸ್. ರಾಘವೇಂದ್ರ ಅವರ ಮನೆಯ ಹತ್ತಿರ ಗುಡ್ಡ ಕುಸಿಯುತ್ತಿದ್ದು, ಮನೆಗೆ ಅಪಾಯ ಎದುರಾಗಿದೆ.
ಶುಕ್ರವಾರದ ರಾತ್ರಿ ಗುಡ್ಡ ಜಾರಿ ಮನೆಯ ಅಂಗಳಕ್ಕೆ ಬಂದಿದೆ. ನಂತರ ಕೆಸರಿನೊಂದಿಗೆ ನೀರು ಹರಿದು ಬರುತ್ತಿದ್ದು ಇನ್ನಷ್ಟು ಗುಡ್ಡ ಜರಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಮನೆಯ ಅಂಗಳ ಪೂರ್ತಿ ಕೆಸರು ತುಂಬಿದ್ದು, ಅದನ್ನು ತೆಗೆಯೋದೆ ಹರಸಹಾಸವಾಗಿದೆ.