
ಕಳಸ ಲೈವ್ ವರದಿ
ಕಳಸ ತಾಲೂಕಿನ ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ಕೆಂಗನಕೊ0ಡದಿ0ದ ಎಸ್.ಕೆ.ಬಾರ್ಡ್ರ್ ವರೆಗೆ ಸುಮಾರು 30ಕಿಮೀ ದೂರ ರಸ್ತೆ ತೀರ ಶಿಥಿಲಗೊಂಡಿರುವ ಬಗ್ಗೆ ಕಳಸ ಲೈವ್ ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದು ಕೊರತೆ ವಿಭಾಗ ಜನಸ್ಪಂದನಕ್ಕೆ ದೂರು ಸಲ್ಲಿಸಿತ್ತು.
ಕಳಸ ಲೈವ್ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದಿರುವ ವರದಿ ರಸ್ತೆಯ ಚಿತ್ರಗಳನ್ನು ಲಗತ್ತಿಸಿ 25-06-2024ರಂದು ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದುಕೊರತೆ ವಿಭಾಗ ಜನಸ್ಪಂದನಕ್ಕೆ ದೂರು ನೀಡಿತ್ತು.
ಈ ದೂರಿಗೆ ಸ್ಪಂದನೆ ದೊರೆತಿದ್ದು, ಮುಖ್ಯಮಂತ್ರಿಗಳ ಕಚೇರಿ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರು.
ಅದರಂತೆ ಲೋಕೋಪಯೋಗಿ ಇಲಾಖೆ ಪರಿಶೀಲನೆ ನಡೆಸಿ ಮರು ಡಾಂಬರೀಕರಣಕ್ಕೆ 52ಕೋಟಿ 50ಲಕ್ಷಕ್ಕೆ ಅನುದಾನ ಕೋರಿ 03-07-2024ರಂದು ಪ್ರಸ್ತಾವಣೆ ಸಲ್ಲಿಸಿದ್ದೇವೆ. ಅನುದಾನ ದೊರಕಿದ ಕೂಡಲೇ ಕಾಮಗಾರಿ ನಡೆಸುವ ಬಗ್ಗೆ ಮಾಹಿತಿಯನ್ನು ಕಳಸ ಲೈವ್ ಗೆ ಸಲ್ಲಿಸಿದ್ದಾರೆ.