ಕಳಸ ಲೈವ್ ವರದಿ
ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಓದು ನಿಲ್ಲಿಸಬಾರದು ಎನ್ನುವ ಉದ್ದೇಶದಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸುಜ್ಞಾ£ ನಿಧಿ ಶಿಷ್ಯ ವೇತನವನ್ನು ಪ್ರಾರಂಬಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.
ಕಳಸ ಮಹಾವೀರ ಭವನದಲ್ಲಿ ನಡೆದ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸಂಸ್ಥೆಯಿಂದ ಶಿಕ್ಷಕರನ್ನು ನೀಡಿ ಅವರ ಗೌರವಧನ ಭರಿಸುತ್ತದೆ. ಶಾಲೆಗೆ ಬೇಕಾದ ಪೀಠೋಪಕರಣಗಳನ್ನು ಕೂಡ ನೀಡುತ್ತಿದೆ ಎಂದು ಹೇಳಿದ ಅವರು ಶಿಕ್ಷಣ ಜೀವನವನ್ನು ರೂಪಿಸುತ್ತದೆ. ಓದುವ ಸಂದರ್ಭದಲ್ಲಿ ಬೇರೆ ಆಲೋಚನೆಗಳಿಗೆ ಮನಸ್ಸು ನೀಡಿ, ಮುಂದೆ ಬರುವಂಥ ಸುಂದರ ದಿನಗಳನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಭಾಗದ 46 ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರಗಳ ವಿತರಣೆಯನ್ನು ಮಾಡಲಾಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ವಿಶ್ವನಾಥ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾವಿತ್ರಿ ಸಮೂಹ ಸಂಪನ್ಮೂಲ ವ್ಯಕ್ತಿ ಸಾಕ್ಷಾರತ ಶಿಕ್ಷಣ ಇಲಾಖೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸುಜಯ ಸದಾನಂದ ಶೌರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಮೇಶ್ ಯಾದವ್ ವಿಪತ್ತು ಘಟಕದ ಮಾಸ್ಟರ್ ಮಹೇಶ್ ಬಿ.ಕೆ, ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಅಜಿತ್ ಕುಲಾಲ್, ಒಕ್ಕೂಟದ ಅಧ್ಯಕ್ಷ ಸುನಿಲ್ ಹಳುವಳ್ಳಿ, ಒಕ್ಕೂಟ ಕಾರ್ಯದರ್ಶಿ ಕುಸುಮ, ಯೋಜನಾಧಿಕಾರಿ ಸುರೇಶ್, ಸೇವಾಪ್ರತಿನಿಧಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.