ಕಳಸ ಲೈವ್ ವರದಿ
ಬಡವರ ಒತ್ತುವರಿ ತೆರವಿಗೆ ಅವಕಾಶ ನೀಡುವುದಿಲ್ಲ, ಅಪಾಯಕಾರಿ ಸ್ಥಳಗಳಲ್ಲಿ ಒತ್ತುವರಿ ತೆರವು ಅನಿವಾರ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಳಸ ತಾಲೂಕಿನ ಐದು ಗ್ರಾಮ ಪಂಚಾಯಿತಿಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ ಮಾತನಾಡಿದ ಅವರು ತಾಲೂಕಿನಲ್ಲಿ ಎಲ್ಲೆಲ್ಲಿ ಟವರ್ ಸಮಸ್ಯೆ ಇದಿಯೋ ಅದನ್ನು ಶೀಘ್ರದಲ್ಲಿ ಸರಿ ಪಡಿಸಲಾಗುವುದು. ಈಗಾಗಲೇ ಅರಣ್ಯ ಭೂಮಿ ಯಾವುದು ಕಂದಾಯ ಭೂಮಿ ಯಾವುದೆಂದು ಗುರುತು ಮಾಡಿಲ್ಲ ಮತ್ತೇಗೆ ತೆರವು ಮಾಡುತ್ತೀರಿ ಎನ್ನುವ ಪ್ರಶ್ನೆಗಳು ಬಂದಿವೆ. ಜಂಟಿ ಸರ್ವೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು. ಕುದುರೆಮುಖ ಟೌನ್ ಶಿಪ್ ಹಾಳು ಬಿದ್ದಿದ್ದು ಇಲ್ಲಿ ಯಾವ ಯೋಜನೆ ಮಾಡಬಹುದು ಎಂದು ಮುಂದಿನ ವಾರ ಕುದುರೆಮುಖದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಭೆಯನ್ನು ಕರೆದು ತೀರ್ಮಾಣ ತೆಗೆದುಕೊಳ್ಳುತ್ತೇನೆ. ಜಲಜೀವನ ಯೋಜನೆಯಲ್ಲಿ ಬಿಟ್ಟು ಹೋದ ಊರುಗಳನ್ನು ಶೀಘ್ರದಲ್ಲಿ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕಳಸ ಆಸ್ಪತ್ರೆಗೆ ಸಿಬ್ಬಂದಿ ನೇಮಕ ಬಗ್ಗೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಸಂಸೆ-ದಿಡುಪೆ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ತೊಡಕು ಉಂಟಾಗಿದ್ದು ಇದನ್ನು ಪರಿಹರಿಸಿ ರಸ್ತೆ ಅಭಿವೃದ್ದಿಗೆ ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಕಳಸ ತಾಲೂಕು ಕೇಂದ್ರವಾಗಿದೆ ಇಲ್ಲಿ ಮೊದಲು ಪಟ್ಟಣ ಪಂಚಾಯಿತಿ ಆಗಬೇಕಿದೆ. ತಾಲೂಕು ಕೇಂದ್ರದಲ್ಲಿ ಇರಬೇಕಾದ 28 ಇಲಾಖೆ ಕಳಸದಲ್ಲಿ ಪ್ರಾರಂಭ ಮಾಡಲು ಕ್ಷೇತ್ರದ ಶಾಸಕರ ಬಳಿ ಚರ್ಚಿಸಿ ಪೂರ್ಣ ಪ್ರಮಾಣದ ಕಚೇರಿಗಳು ಕಳಸಕ್ಕೆ ಬರಲು ಶೀಘ್ರ ಕ್ರಮ ತೆಗೆದುಕೋಳ್ಳಲಾಗುವುದು. ಇನ್ನು 15 ದಿನದಲ್ಲಿ ಕಳಸ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ಊರಿನ ಅಭಿವೃದ್ಧಿಗೆ ಬಗ್ಗೆ ಮತ್ತು ಸಾರ್ವಜನಿಕರ ಅವಹಾಲು ಸ್ವೀಕರಿಸಲು ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಇದಕ್ಕಿಂತ ಮುಂಚಿತವಾಗಿ ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ ಇಲಾಖೆಗೆ ಯಾವುದು ಕಂದಾಯ ಭೂಮಿ ಯಾವುದೂ ಅರಣ್ಯ ಭೂಮಿ ಎನ್ನು ಖಾತರಿ ಇಲ್ಲ ಮತ್ತೇಗೆ ನೀವು ಒತ್ತುವರಿ ತೆರವು ಮಾಡಲು ಬರುತ್ತೀರಿ. ಒತ್ತುವರಿ ಮಾಡಲು ಅರಣ್ಯ ಇಲಾಖೆಯೆ ದುಡ್ಡು ತೆಗೆದುಕೊಂಡು ಅವಕಾಶ ಮಾಡಿಕೊಟ್ಟಿರುವುದು. ಒತ್ತುವರಿ ತೆರವು ಮಾಡಲು ಬಂದರೆ ರಕ್ತಪಾತ ಆಗಬಹುದು. ಒತ್ತುವರಿ ಭೂಮಿಯನ್ನು ಲೀಸ್ಗೆ ಕೊಡುತ್ತೇವೆ ಎಂದು ಒಂದೆಡೆ ಹೇಳುತ್ತಾ ಸರ್ಕಾರ ಇನ್ನೊಂದೆಡೆ ಒತ್ತುವರಿ ತೆರವು ಮಾಡುತ್ತಿದೆ ಇದ್ಯಾವ ನ್ಯಾಯ. ಕಳಸ ತಾಲೂಕು ಕೇಂದ್ರ ಆಗಿದೆ ಆದರೆ ತಾಲೂಕು ಕೇಂದ್ರದಲ್ಲಿ ಯಾವುದೂ ಕೆಲಸಗಳು ಆಗುತ್ತಿಲ್ಲ. ಹೀಗೆ ಮುಂದುವರೆದರೆ ತಾಲೂಕು ಕಚೇರಿಗೆ ಬೀಗ ಹಾಕುತ್ತೇವೆ ಎಂದು ಹೇಳಿದರು.
ಇದಕ್ಕಿಂತ ಮುಂಚಿತವಾಗಿ ಹಾಳು ಬಿದ್ದ ಕುದುರೆಮುಖ ಟೌನ್ ಶಿಪ್, ಕುದುರೆಮುಖ ಲೇಬರ್ ಕಾಲೋನಿ ಹಾಗೂ ಸಂಸೆ-ಎಳನೀರು ರಸ್ತೆಯನ್ನು ಪರಿಶೀಲಿಸಿದರು ಹಾಗೂ ಸಂಸೆ, ಕಳಸ, ಮರಸಣಿಗೆ, ಇಡಕಣಿ, ತೋಟದೂರು ಪಂಚಾಯಿತಿಗಳಿಗೆ ತೆರಳಿ ಜನರ ಅವಹಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಉಪಾಧ್ಯಕ್ಷ ರಂಗನಾಥ್, ಬಿಜೆಪಿ ಅಧ್ಯಕ್ಷ ನಾಗಭೂಷನ್, ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ ಮುಖಂಡರುಗಳಾದ ಎಂ.ಎ.ಶೇಷಗಿರಿ, ದೀಪಕ್ ದೊಡ್ಡಯ್ಯ, ಜ್ವಾನಲಯ್ಯ, ಜಗದೀಶ್ ನೆಲ್ಲಿಬೀಡು, ಬಿ.ಕೆ.ಮಹೇಶ್, ಸುಜಯ ಸದಾನಂದ ಇತರರು ಇದ್ದರು.
Related Stories
September 18, 2024