ಕಳಸ ಲೈವ್ ವರದಿ
ಕಳಸ ಆಡಳಿತಾತ್ಮಕವಾಗಿ ತಾಲೂಕು ಕೇಂದ್ರವಾಗಿದ್ದು, ಕಳಸವನ್ನು ಮೂಡಿಗೆರೆ ಮಂಡಲದಿಂದ ಬೇರ್ಪಡಿಸಿ ಕಳಸವನ್ನು ಪ್ರತ್ಯೇಕವಾಗಿ ಬಿಜೆಪಿ ಮಂಡಲವನ್ನಾಗಿ ಮಾಡಬೇಕು ಎಂದು ಕಳಸದ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕಳಸ ಮಹಿಳಾ ಮಂಡಳಿಯಲ್ಲಿ ಸೋಮವಾರ ಬಿಜೆಪಿಯ ಸುಮಾರು 150ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ಸಭೆ ನಡೆಸಿ ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ರಂಗನಾಥ್, ಈ ಹಿಂದೆ ಕಳಸ ಹೋಬಳಿಯಾಗಿತ್ತು ಆದ್ದರಿಂದ ಕಳಸ ಮೂಡಿಗೆರೆ ಮಂಡಲದಲ್ಲಿತ್ತು ಈಗ ತಾಲೂಕು ಕೇಂದ್ರವಾಗಿದೆ ನಾವು ಪ್ರತ್ಯೇಕವಾಗಿ ಕಳಸ ಮಂಡಲ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನಮ್ಮ ಆಡಳಿತವನ್ನು ಜಿಲ್ಲೆಯ ಕೈಕೆಳಗೆ ಇರುತ್ತೇವೆಯೆ ಹೊರತು ಮೂಡಿಗೆರೆ ಮಂಡಲದ ಕೈಕೆಳಗಡೆ ನಾವು ಇರೋದಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಿಗೂ ಒತ್ತಡವನ್ನು ಹೇರುತ್ತೇವೆ ಎಂದು ಹೇಳಿದರು.
ಮುಖಂಡ ಗಿರೀಶ್ ಹೆಮ್ಮಕ್ಕಿ ಮಾತನಾಡಿ ಕಳಸದಲ್ಲಿ ಬಿಜೆಪಿಯನ್ನು ಗಟ್ಟಿ ಮಾಡಲು ಮಂಡಲದ ಅವಶ್ಯಕತೆ ಇದೆ. ಇದಕ್ಕಾಗಿ ನಾವು ಹೋರಾಟ ಮಾಡುತ್ತೇವೆ.ಎಲ್ಲಿ ತನಕ ನಮ್ಮ ಕಳಸವನ್ನು ಕಳಸ ಮಂಡಲ ಮಾಡುವುದಿಲ್ವೋ ಅಲ್ಲಿ ವರೆಗೆ ನಾವು ಬಿಜೆಪಿಯ ಯಾವುದೇ ಸಭೆಯಲ್ಲೂ ನಾವು ಸೇರುವುದಿಲ್ಲ. ನಾವು ರಾಜ್ಯಾಧ್ಯಕ್ಷರನ್ನು ಬೇಟಿಯಾಗುವುದಕ್ಕಿಂತ ಮುಂಚಿತವಾಗಿ ಹಿರಿಯ ನಾಯಕರು ಸೇರಿ ಕಳಸ ಮಂಡಲ ಮಾಡಿದರೆ ಉತ್ತಮ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಜಯ ಸದಾನಂದ ಮಾತನಾಡಿ ಕಳಸವನ್ನು ಮಂಡಲ ಮಾಡಬೇಕು ಎನ್ನುವ ಒತ್ತಡ ಕಳಸ ಬಿಜೆಪಿ ಕಾರ್ಯಕರ್ತರದ್ದು ಇದೆ.ಇದನ್ನು ನಾನು ಜಿಲ್ಲಾಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಾರ್ತಿಕ್ ಶಾಸ್ತ್ರೀ, ಬಿ.ಕೆ.ಮಹೇಶ್, ಪ್ರದೀಪ್ ಸಂಸೆ, ಜಗದೀಶ್ ನೆಲ್ಲಿಬೀಡು, ಸತೀಶ್ ಎಸ.ಕೆ.ಮೇಗಲ್, ಸುರೇಶ್ ನೂಜಿ, ಗೋಪಾಲ ಗೌಡ ಹೆಮ್ಮಕ್ಕಿ, ರಾಜೇಶ್ ಮರಸಣಿಗೆ, ರಮೇಶ್ ಮರಸಣಿಗೆ, ಮಹೇಶ್ ಹಳುವಳ್ಳಿ, ಮಹೇಶ್ ಹೆರಟೆ,