ಕಳಸ ಲೈವ್ ವರದಿ
ಬಾಳೆಹೊನ್ನೂರಿನಲ್ಲಿ ನಡೆದ ಜೆಸಿಐ ವಲಯ 14 ರ ಬೆಳವಣಿಗೆ ಹಾಗು ಅಭಿವೃದ್ಧಿಯ ಸಮ್ಮೇಳನದಲ್ಲಿ ಕಳಸ ಜೆಸಿಐ ಘಟಕವು ಐದನೇ ಸ್ಥಾನವನ್ನು ಪಡೆದುಕೊಂಡಿತು.
ವಲಯ 14ರ 42 ಘಟಕಗಳ ಪೈಕಿ ಕಳಸ ಜೆಸಿಐ ಘಟಕ ಐದನೇ ಸ್ಥಾನವನ್ನು ಪಡೆದುಕೊಂಡಿದ್ದು, ಮೊದಲನೇ ಸ್ಥಾನವನ್ನು ಮೂಡಿಗೆರೆ, ದ್ವಿತೀಯ ಜೆಸಿಐ ದೇವನಹಳ್ಳಿ,ಮೂರನೇ ಸ್ಥಾನ ಬಣಕಲ್, ನಾಲ್ಕನೇ ಸ್ಥಾನವನ್ನು ಬಣಕಲ್ ಪಡೆದುಕೊಂಡಿತ್ತು.
ಪ್ರಶಸ್ತಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರಾದ ರಾಕೇಶ್ ಶರ್ಮಾ ಹಸ್ತಾಂತರಿಸಿದರು. ಈ ಸಂದರ್ಭ ದಲ್ಲಿ ಕಳಸ ಘಟಕದ ಅಧ್ಯಕ್ಷರಾದ ಶ್ರೀಕಾಂತ್ , ಪೂರ್ವಾಧ್ಯಕ್ಷರಾದ ಅಶೋಕ್ ಆರ್ ಜಾವಳಿ , ಪ್ರಶಾಂತ್ ಹೆಚ್.ಆರ್ ಹಾಗು ಖಜಾಂಜಿಗಳಾದ ಮುರುಳಿ ,ಅಭಿವೃದ್ಧಿ ಮತ್ತು ಬೆಳವಣಿಗೆ ಘಟಕ ನಿರ್ದೇಶಕರಾದ ಶಿವಪ್ರಸಾದ್ ಹಾಜರಿದ್ದರು
Related Stories
September 18, 2024