ಕಳಸ ಲೈವ್ ವರದಿ
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಗೋಶಾಲೆಯಲ್ಲಿ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಬೀ ಜೋಷಿ ಗೋ ಪೂಜೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಹಾಗೂ ಕಳಸ ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ರಮೇಶ್.ಸಿ ಮಾತನಾಡಿ, ಜಾನುವಾರುಗಳಿಗೆ ಪ್ರತೀ 6 ತಿಂಗಳಿಗೊಮ್ಮೆ ಕಾಲು ಬಾಯಿರೋಗದ ಲಸಿಕೆಯನ್ನು ಹಾಕಿಸಿಕೊಂಡು ಈ ರೋಗದಿಂದ ಮುಕ್ತಿಗೊಳಿಸಬೇಕು. ಈ ರೋಗವು ಮಾರಣಾಂತಿಕ ಅಲ್ಲದಿದ್ದರೂ ಕಾಲು ಬಾಯಿ ರೋಗಕ್ಕೆ ತುತ್ತಾದ ರಾಸುಗಳಲ್ಲಿ ಹಾಲು ಉತ್ಪಾದನಾ ಸಾಮಥ್ರ್ಯ ಕುಗ್ಗುವುದು, ಗರ್ಭಧರಿಸುವ ಪ್ರಮಾಣ ಕಡಿಮೆಯಾಗುವುದು. ಏತ್ತು, ಹೋರಿಗಳಲ್ಲಿ ಕೆಲಸ ಮಾಡುವ ಸಾಮಥ್ರ್ಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಳಸ ಪಶು ಆಸ್ಪತ್ರೆ ಪಶುವೈದ್ಯಾಧಿಕಾರಿ ಡಾ. ಮಮತ, ಜಾನುವಾರು ಅಧಿಕಾರಿ ಎ. ಎಂ ನಾಗೇಂದ್ರ, ಹಿರಿಯ ಪಶುವೈದ್ಯಕೀಯ ಪರೀಕ್ಷಕಿ ಪ್ರಭಾವತಿ ಬಿ. ಟಿ, ಪಶು ವೈದ್ಯಕೀಯ ಪರೀಕ್ಷಕರುಗಳಾದ ಜಯಣ್ಣ, ರಾಜಪ್ಪ, ಪಶು ಸಖಿಯರದ ವಸಂತಿ, ಸ್ಮಿತಾ, ಕವಿತಾ ಇತರರು ಇದ್ದರು.

