
ಕಳಸ ಲೈವ್ ವರದಿ
ಸಂಸೆ ಶ್ರೀ ವಸುಪ್ರದ ಪ್ಲಾಂಟೇಷನ್, ಗುಮ್ಮನಖಾನ್ ಎಸ್ಟೇಟ್ ಶ್ರೀ ಸರ್ವಸಿದ್ಧಿ ಮಹಾಗಣಪತಿ ಸ್ವಾಮಿ, ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಚೌಡಿ ದೇವಿಯವರ ಜೀರ್ಣಾಷ್ಠಬಂಧ ಹಾಗೂ ಬ್ರಹ್ಮ ಕುಂಭಾಭಿಷೇಕ ಮಹೋತ್ಸವವು ಜೂನ್ 18, 2026ರ ಗುರುವಾರದಂದು ಅತ್ಯಂತ ವೈಭವದಿಂದ ಜರುಗಲಿದೆ.
ವೇದಮೂರ್ತಿ ಅನಂತ ಗೋಖಲೆ, ಕಾರ್ಕಳ ಇವರ ನೇತೃತ್ವದಲ್ಲಿ ಪೂರ್ವಾಂಗ ಧಾರ್ಮಿಕ ಯಜ್ಞ ವಿಧಿ ವಿಧಾನಗಳು, ಶಿಖರ ಪ್ರತಿಷ್ಠೆ ಮತ್ತು ಕುಂಭಾಭಿಷೇಕಗಳು ನೆರವೇರಲಿವೆ. ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಪೂಜ್ಯ ಡಾ|| ಜಿ. ಭೀಮೇಶ್ವರ ಜೋಷಿ ಇವರ ಅಮೃತ ಹಸ್ತದಿಂದ ಸರ್ವ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

ಅAದು ಬೆಳಗ್ಗೆ 10:30ರಿಂದ 11:15ರ ವರೆಗೆ ವಿಶೇಷ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಶ್ರೀ ವಸುಪ್ರದ ಪ್ಲಾಂಟೇಷನ್ಸ್ ಲಿಮಿಟೆಡ್ನ ಅಧ್ಯಕ್ಷರಾದ ಶ್ರೀ ಪಿ.ಎನ್.ರಾವುನ್ನಿ ಅವರು ವಹಿಸಲಿದ್ದಾರೆ. ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಪೂಜ್ಯಶ್ರೀ ಡಾ|| ಜಿ. ಭೀಮೇಶ್ವರ ಜೋಷಿ ಅವರು ದಿವ್ಯ ಸನ್ನಿಧಾನ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಹೊರನಾಡಿನ ಶ್ರೀಮತಿ ರಾಜಲಕ್ಷ್ಮಿ ಜಿ. ಭೀ. ಜೋಷಿ ಅವರು ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ ಬೆಳಗ್ಗೆ 6:30ಕ್ಕೆ: ಪೂಜೆ, ಪ್ರಧಾನ ಹೋಮ.ಬೆಳಗ್ಗೆ 9:20ಕ್ಕೆ: ಕರ್ಕಾಟಕ ಲಗ್ನದಲ್ಲಿ ಶಿಖರ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ಚತುರ್ಥಿ ಗಣಪತಿ ಹವನ. ಬೆಳಗ್ಗೆ 10:30ರಿಂದ 11:15ರ ವರೆಗೆ: ಸಭಾ ಕಾರ್ಯಕ್ರಮ. ಬೆಳಗ್ಗೆ 11:30ಕ್ಕೆ: ಪೂರ್ಣಾಹುತಿ, ಮಹಾಪೂಜೆ, ಮಹಾಮಂಗಳಾರತಿ ತದನಂತರ ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
