
ಕಳಸ ಲೈವ್ ವರದಿ
ಕಲಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದಿರುವ ಕಳಸ ತಾಲ್ಲೂಕಿನ ತನೋಡಿ (ಹೆಬ್ಬಾಳೆ) ಗ್ರಾಮದ ಪ್ರತಿಭಾನ್ವಿತ ಯುವತಿ ವೀಣಾ ಅವರಿಗೆ ಪ್ರತಿಷ್ಠಿತ ‘ವಿದ್ಯಾಸಿರಿ ಪ್ರಶಸ್ತಿ 2026’ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿ ವತಿಯಿಂದ ಮೂಡುಬಿದಿರೆಯ ಕನ್ನಡ ಭವನದಲ್ಲಿ ಜೂನ್ 14 ರಂದು ಆಯೋಜಿಸಲಾಗಿದ್ದ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಇವರೊಂದಿಗೆ ಗಿನ್ನೆಸ್ ದಾಖಲೆ ನಿರ್ಮಿಸಿದ ಕಲಾತಪಸ್ವಿ ಆರ್ಟಿಸ್ಟ್ ವಿನಯ್ ಕುಮಾರ್, ವೈಧ್ಯಕೀಯ ಕ್ಷೇತ್ರದಲ್ಲಿ ಕೆಳಗೂರಿನ ಮೋಕ್ಷಿತಾ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ನಳಿನಾಕ್ಷಿ, ನಂದಕುಮಾರ್ ಮತ್ತು ರಂಜನ್ ಸೇರಿದಂತೆ ವಿದ್ಯಾರ್ಥಿಗಳಾದ ಹಂಸ, ಸಾಹಿತ್ಯ ಅವರನ್ನು ಗೌರವಿಸಲಾಯಿತು.

ವೀಣಾ ಅವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆ0ಟ್ ಆಗಿ, ಶಿಕ್ಷಣದಲ್ಲಿ ಮಾತ್ರವಲ್ಲದೆ ಕಲೆ, ಕ್ರೀಡೆ ಹಾಗೂ ಸಾಮಾಜಿಕ ಸೇವೆಗಳಲ್ಲೂ ಅಪಾರ ಸಾಧನೆ ಮಾಡಿದ್ದಾರೆ.ಇವರು ಉತ್ತಮ ನೃತ್ಯಗಾರ್ತಿಯಾಗಿದ್ದು, ‘ವಿಕೆ ಆರ್ಟ್ ಗ್ಯಾಲರಿ’ ಎಂಬ ಸಂಸ್ಥೆಯ ಮೂಲಕ ಯುವ ಪ್ರತಿಭೆಗಳಿಗೆ ಚಿತ್ರಕಲೆ ತರಬೇತಿಯನ್ನು ನೀಡುತ್ತಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಜಯಿಸಿದ್ದಾರೆ. ಹಿತಲಿಂಗ್ ಥೆರಪಿ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿವಾಸ್ ಎಂ.ಎಸ್.ಮಿಜಾರ್ ವಹಿಸಿದ್ದರು. ಗಿರೀಶ್ ಆಳ್ವ, ಮೂಡುಬಿದಿರೆ ಶ್ರೀನಿವಾಸ ನೇತ್ರಾಲಯದ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ನಿವೇದಿತಾ, ಹಾಂದಿ ವರಾಹ ರುದ್ರೇಶ್ವರ ದೇವಸ್ಥಾನದ ಧರ್ಮದರ್ಶಿ ಚಂದ್ರನಾಥ್ ಅಘೋರಿ, ವಿಟ್ಲದ ಸೇಸಪ್ಪ ಬೆದ್ರಕಾಡು, ಕೃಷ್ಣಪ್ಪ ಜಾವಳಿ, ಸುರೇಶ್ ಆರ್ಡಿ ಕೊಪ್ಪ, ಪಡೀಲ್ ಮಹಾಬಲ ಎಂ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
