ಕಳಸ ಲೈವ್ ವರದಿ
ಕಳೆದ ಕೆಲ ದಿನಗಳಿಂದ ಕಳಸ ಕೆನರಾ ಬ್ಯಾಂಕ್ನಲ್ಲಿ ಸಿಬ್ಬಂದಿಗಳ ಕೊರತೆಯಿಂದ ಗ್ರಾಹಕರಿಗೆ ತೀರ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಬುಧವಾರ ಗ್ರಾಹಕರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳಸ ಕೆನರಾ ಬ್ಯಾಂಕ್ ನಲ್ಲಿ ಸಿಬ್ಬಂದಿಗಳು ಗ್ರಾಹಕರು ತಮ್ಮ ಬ್ಯಾಂಕ್ ವ್ಯವಹಾರಕ್ಕೆ ಬಂದರೆ ದಿನವಿಡೀ ದಿನವಿಡಿ ಸರತಿ ಸಾಲಿನಲ್ಲಿ ನಿಲ್ಲುವ ಪರಸ್ಥಿತಿ ನಿರ್ಮಾಣವಾಗಿದೆ .ಕಛೇರಿಯಲ್ಲಿ ವ್ಯವಸ್ಥಾಪಕರೂ ಕೂಡ ಇಲ್ದೆ ಕೇವಲ ಇಬ್ಬರು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಬ್ಬದ ಸಂದರ್ಭವಾಗಿರುವುದರಿಂದ ಬುಧವಾರ ಸಹಜವಾಗಿಯೇ ಗ್ರಾಹಕರ ಸಂಖ್ಯೆ ಜಾಸ್ತಿ ಇದೆ. ಗುರುವಾರದಿಂದ ಸಾಲು ಸಾಲು ರಜಾ ಬೇರೆ, ಈ ಸಂದರ್ಭದಲ್ಲಿಯೇ ಸಿಬ್ಬಂದಿಗಳ ಕೊರತೆ ಬೇರೆ, ಈ ರೀತಿಯ ವ್ಯವಸ್ಥೆಯಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿರುವ ಸಿಬ್ಬಂದಿಗಳಿಗೆ ಕನ್ನಡ ಬಾಷೆನೂ ಬರೋದಿಲ್ಲ. ಜನಸ್ನೇಹಿಯಾಗಿ ಇರಬೇಕಾದ ಬ್ಯಾಂಕ್ ಗಳು ಜನರಿಗೆ ತೊಂದರೆ ನೀಡುತ್ತಿವೆ. ಇದೇ ರೀತಿ ಮುಂದುವರೆದರೆ ಕೆನರಾ ಬ್ಯಾಂಕ್ ಮುಂಬಾಗ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮುಖಂಡ ಬಿ.ವಿ. ರವಿ ರೈ ಎಚ್ಚರಿಸಿದ್ದಾರೆ.
ಮಂಗಳವಾರ ಬ್ಯಾಂಕ್ ಗೆ ಬಂದೆ ಸಂಜೆ 5 ಗಂಟೆ ತನಕ ಕೂರಿಸಿ ನಂತರ ವಾಪಾಸು ಕಳುಹಿಸಿದ್ದಾರೆ.ಇವತ್ತು ಮತ್ತೆ ಬ್ಯಾಂಕ್ ಗೆ ಬಂದಿದ್ದೇನೆ.ಇಲ್ಲಿ ಯಾರೂ ಕೂಡ ಸರಿಯಾಗಿ ನಮಗೆ ಸ್ಪಂದಿಸುತ್ತಿಲ್ಲ.ನಾವು ಕೇವಲ ಬ್ಯಾಂಕ್ ಕೆಲಸಕ್ಕಾಗಿ ರಜಾ ಮಾಡಿ ಎರಡು ದಿನ ಇಲ್ಲಿ ಕಾಯುವಂತ ಸ್ಥಿತಿ ಇದೆ ಎಂದು ಗ್ರಾಹಕರಾದ ಕಮಲ ತಮ್ಮ ಅಸಮದಾನ ವ್ಯಕ್ತ ಪಡಿಸಿದ್ದಾರೆ.