ಕಳಸ ಲೈವ್ ವರದಿ
ಸಂಸೆ ಗ್ರಾಮದ ಕಾರ್ಮಣ್ಣು ಶ್ರೀ ವರಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ರೂ ಸಹಾಯಧನ ನೀಡಲಾಗಿದೆ
ಸಹಾಯಧನ ಮೊತ್ತದ ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ಸುರೇಶ್ ದೇವಸ್ಥಾನದ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಪದ್ಮಾವತಿ ದೇವಸ್ಥಾನದ ಉಪಾಧ್ಯಕ್ಷರಾದ ಸನ್ಮತಿ ಜೈನ್, ಐಟಿಐ ಪ್ರಾಂಶುಪಾಲ ಸತೀಶ್ ಹಾಗೂ ಸಿಬ್ಬಂದಿಯವರು, ಒಕ್ಕೂಟದ ಪದಾಧಿಕಾರಿಗಳು, ಸುವಿಧಾ ಸಹಾಯಕರು, ಸೇವಾಪ್ರತಿನಿಧಿ ಶೌರ್ಯ ವಿಪತ್ತು ಸದಸ್ಯರಾದ ಸತೀಶ್ ಎಂ, ಸುಕುಮಾರ್, ಪಿಲಿಪ್, ಅಶ್ವಿನಿ, ವಿನುತ ಇದ್ದರು.