ಕಳಸ ಲೈವ್ ವರದಿ
ಕಳಸ ಶ್ರೀ ಹೊಸದೇವರ ಚಾವಡಿ, ಬೆಳ್ಳಾರಮ್ಮ ಹಾಗೂ ಗುತ್ಯಮ್ಮನ ದೇವಸ್ಥಾನದಲ್ಲಿ ಡಿಸೆಂಬರ್ 3 ರಂದು ದೀಪೋತ್ಸವ ನಡೆಯಲಿದೆ.
ಬೆಳಗ್ಗೆ ಒಂಬತ್ತು ಗಂಟೆಗೆ ಬಂಡಾರ ಮನೆಯಿಂದ ಬಂಡಾರವನ್ನು ಹೊರಡಿಸಿ, ಕಳಸೇಶ್ವರ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರತಿ ಸ್ವೀಕರಿಸಿ ತದನಂತರ ವೆಂಕಟರಮಣ ದೇವಸ್ಥಾನದಲ್ಲಿಯೂ ಮಂಗಳಾರತಿ ಸ್ವೀಕರಿಸಿ ಹೊಸದೇವರ ಚಾವಡಿಗೆ ಭಂಡಾರ ತಲುಪುವುದು. ಸಾಯಂಕಾಲ 5:30ಗೆ ಪುಣ್ಯಾಯ ಹಾಗೂ ದೀಪದ ಕಟ್ಟಲೆ ಶುರುವಾಗುವುದು. ಅಡಕೋಡು ಚೌಡಿಯ ದರ್ಶನವೂ ಇರುವುದು. ಬಳ್ಳಾರಮ್ಮ ಹಾಗೂ ಹಳಿದೇವರು ಗಳ ದರ್ಶನದ ನಂತರ ಭಂಡಾರವು ಗುತ್ಯಮ್ಮ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರತಿ ಸ್ವೀಕರಿಸಿ ಅಲ್ಲಿಂದ 11 ಗಂಟೆಗೆ ಭಂಡಾರದ ಮನೆಗೆ ಒಕ್ಕಲಾಗುವುದು.
ಊರಿನ ಸಮಸ್ತ ಭಕ್ತಾದಿಗಳನ್ನು ಆಹ್ವಾನಿಸುವ
ಭಂಡಾರದ ಮನೆಯವರು, ಮೂರು ಗುತ್ತಿನ ತಲೆಮಾರಿನ ಎಡೆದಾಳಿನ ಎರಡು ಕುಟುಂಬದವರು, ದುಂಡಿಗೆಯ ಕುಟುಂಬಸ್ಥರು, ಕೊಡಿಗೆ ಮನೆತನದವರು ಹಾಗೂ ಕುಂಬಾರ ವರ್ಗದವರು.