
oplus_262144
ಕಳಸ ಲೈವ್ ವರದಿ
ಕುದುರೆಮುಖ- ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಯಲ್ಲಿ ಕೆಲ ದಿನಗಳಿಂದ ಮರವೊಂದು ಬಿದ್ದಿದ್ದು ಇದರಿಂದ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ ಕೂಡಲೇ ತೆರವು ಮಾಡಬೇಕು ವಾಹನ ಸವಾರರು ಒತ್ತಾಯಿಸಿದ್ದಾರೆ.
ಮರ ರಸ್ತೆಗೆ ಬಿದ್ದು ಕೆಲ ದಿನಗಳಾದರೂ ಕೂಡ ಇದನ್ನು ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ.ಮಂಗಳೂರು, ಕಾರ್ಕಳ, ಮಣಿಪಾಲ, ಉಡುಪಿ ಕಡೆ ಹೋಗುವ ಪ್ರಯಾಣಿಕರು ಇದೇ ರಸ್ತೆಯಲ್ಲಿ ಹೋಗಬೇಕಾಗಿದ್ದು, ರಸ್ತೆಗೆ ಬಿದ್ದ ಈ ಮರದಿಂದ ತೀರ ತೊಂದರೆ ಉಂಟಾಗುತ್ತಿದೆ.ರಾತ್ರಿ ವೇಳೆಯಲ್ಲಿ ಅಪಘಾತ ಆಗುವ ಸಂಭವವು ಹೆಚ್ಚಿರುತ್ತದೆ.
ಅರಣ್ಯ ಇಲಾಖೆ ವಾಹನವು ಇದೇ ರಸ್ತೆಯಲ್ಲಿ ಹತ್ತಾರು ಬಾರಿ ಸಂಚಾರ ಮಾಡುತ್ತಿದ್ದರೂ ಕೂಡ ಮರ ತೆರವಿಗೆ ಮುಂದಾಗುತ್ತಿಲ್ಲ. ಈ ಪ್ರದೇಶದಲ್ಲಿ ಅವಘಡ ಆಗುವ ಮುಂಚಿತವಾಗಿ ಮರವನ್ನು ತೆರವು ಮಾಡಿ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.