
ಕಳಸ ಲೈವ್ ವರದಿ
ಕುದುರೆಮುಖ-ಎಸ್.ಕೆ.ಬಾರ್ಡರ್ ರಸ್ತೆ ಮಧ್ಯೆ ಕಳೆದ ಮೂರು ದಿನಗಳ ಹಿಂದೆ ಬಿದ್ದ ಮರವನ್ನು ಶೌರ್ಯ ವಿಪತ್ತು ಸಂಸೆ ಘಟಕದ ಸದಸ್ಯರು ತೆರವು ಮಾಡಿದ್ದಾರೆ.
ಕುದುರೆಮುಖ- ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಯಲ್ಲಿ ಕೆಲ ದಿನಗಳಿಂದ ಮರವೊಂದು ಬಿದ್ದಿದ್ದು ಇದರಿಂದ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ಈ ಬಗ್ಗೆ ವಾಹನ ಸವಾರರು ಕಳಸ ಲೈವ್ಗೆ ಮಾಹಿತಿಯನ್ನು ನೀಡಿದ್ದರು.
ಈ ಬಗ್ಗೆ ಡಿ 4ರಂದು ಕಳಸ ಲೈವ್ ನಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು.ವರದಿ ಪ್ರಕಟವಾದ ಬೆನ್ನಲ್ಲೆ ಶೌರ್ಯ ವಿಪತ್ತು ಸಂಸೆ ಘಟಕದ ಸದಸ್ಯರಾದ ಚೇತನ್, ಅಶೋಕ್, ಸತೀಶ್ ಸ್ಥಳಕ್ಕೆ ಬೇಟಿ ನೀಡಿ ಮರವನ್ನು ತೆರವುಗೊಳಿಸಿ ವಾಹನ ಸವಾರರಿಗೆ ಆಗುತ್ತಿದ್ದ ತೊಂದೆಯನ್ನು ತಪ್ಪಿಸಿದ್ದಾರೆ.ಮರ ತೆರವುಗೊಳಿಸಿದ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ವಾಹನ ಸವಾರರು ಕೃತಜ್ಞತೆ ಸಲ್ಲಿಸಿದ್ದಾರೆ.





