ಕಳಸ ಲೈವ್ ವರದಿ
ವಿಶ್ವಹಿಂದೂ ಪರಿಷದ್ ಬಜರಂಗದಳ ಕಳಸ ಪ್ರಖಂಡದ ವತಿಯಿಂದ ಶ್ರೀ ದತ್ತ ಜಯಂತಿ ದತ್ತ ಮಾಲಾ ಅಭಿಯಾನದ ಅಂಗವಾಗಿ ಡಿಸೆಂಬರ್ 11 ರಂದು ಸಂಕೀರ್ತನಾ ಯಾತ್ರೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ 2.30ಗೆ ಕಳಸದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಸಂಕೀರ್ತನಾ ಯಾತ್ರೆಯು ಹೊರಟು ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದವರೆಗೆ ಸಾಗಿ ನಂತರ ದುರ್ಗಾ ಮಂಟಪದಲ್ಲಿ ಸಮಾವೇಶಗೊಳ್ಳುವುದು.
ಸಂಕೀರ್ತನಾ ಯಾತ್ರೆಯಲ್ಲಿ ಪ್ರಖ್ಯಾತ ತಂಡದವರಿಂದ ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ರೀತಿಯ ಟ್ಯಾಬ್ಲೋಗಳು ಇರಲಿವೆ.
ಧಾಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮಿಜಿಗಳು ಆಶೀರ್ವಚನ ನೀಡಲಿದ್ದಾರೆ.ಕರ್ನಾಟಕ ದಕ್ಷಿಣಪ್ರಾಂತದ ದುರ್ಗಾವಾಹಿನಿ ಸಂಯೋಜಕಿ ಶ್ರೀಮತಿ ಸುರೇಖಾರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.





