
ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವರ ಜಾತ್ರಾ ಮಹೋತ್ಸವಕ್ಕೆ ಶುಭಕೋರಿ ಹಾಕಿದ ಬ್ಯಾನರ್ಗೆ ಸೆಗಣಿ ಮತ್ತು ಕೆಸರು ಎರಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ)ಬಣ ಕಳಸ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳಸ ಸಮುದಾಯ ಆರೋಗ್ಯ ಕೇಂದ್ರದ ಬಳಿ ಕಳಸ ಕಲಶೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವರ ಜಾತ್ರಾ ಮಹೋತ್ಸವಕ್ಕೆ ಶುಭ ಕೋರುವ ಬ್ಯಾನರನ್ನು ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ)ಬಣದ ವತಿಯಿಂದ ಹಾಕಲಾಗಿತ್ತು. ಈ ಬ್ಯಾನರ್ನಲ್ಲಿ ಇರುವ ಕಲಶೇಶ್ವರ ದೇವರ ಚಿತ್ರ, ಬ್ರಹ್ಮ ರಥದ ಚಿತ್ರ, ಅನ್ನಪೂರ್ಣೇಶ್ವರಿ ದೇವರ ಚಿತ್ರ ಹಾಗೂ ನಮ್ಮ ಸಂಘಟನೆಯ ಮುಖಂಡರ ಭಾವ ಚಿತ್ರಗಳಿಗೆ ಸೆಗಣಿ ಮತ್ತು ಕೆಸರನ್ನು ಎರಚಿ ಅವಮಾನ ಮಾಡಲಾಗಿದೆ.
ಈ ರೀತಿಯ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು,ಕರವೇ ಅಧ್ಯಕ್ಷ ಚೌಡನಾಯ್ಕ, ಶರೀಪ್ ಇದ್ದರು.

