ಕಳಸ ಲೈವ್ ವರದಿ
ಆಯುಷ್ಮಾನ್ ಆಸ್ಪತ್ರೆಗಳ ಕಟ್ಟಡಕ್ಕೆ ಕನಿಷ್ಠ ಭೂಮಿ ಮಂಜೂರು ಮಾಡಲು ಸ್ಥಳೀಯ ಆಡಳಿತ ಮೀನಾ ಮೇಷ ಎನಿಸುತ್ತಿದೆ ಎಂದು ಕಳಸ ತಾಲೂಕು ಹಸಲರ ಸಂಘದ ಅಧ್ಯಕ್ಷ ಲಿಂಗಪ್ಪ ಆರೋಪಿಸಿದ್ದಾರೆ.
ಕಳಸ ತಾಲೂಕಿನಾದ್ಯಂತ ಹಲವು ಹಳ್ಳಿಗಳಲ್ಲಿ ಆಯುಷ್ಮಾನ್ ಆಸ್ಪತ್ರೆ ಗಳನ್ನು ತೆರೆದು ವರ್ಷಗಳೇ ಕಳೆದಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಕಾರ್ಯಚರಿಸುತ್ತಿರುವ ಈ ಅರೋಗ್ಯ ಕೇಂದ್ರ ಸ್ಥಳೀಯ ಸಾರ್ವಜನಿಕರಿಗೆ ಸಾಧಾರಣ ಕಾಯಿಲೆಗಳಿಗೆ ಸ್ಪಂಧಿಸುತ್ತಿದ್ದೂ ಮತ್ತು ಅಗತ್ಯ ಸೇವೆಗಳಿಗೆ ತಪಾಸಣೆಗೆ ತಮ್ಮ ತಮ್ಮ ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುವ ಈ ವೈದ್ಯರುಗಳು ಯಾವುದೇ ಶುಲ್ಕ ತೆಗೆದು ಕೊಳ್ಳದೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಬಡ ಕೂಲಿ ಕಾರ್ಮಿಕರಿಗೆ ಪ್ರಯೋಜನವಾಗುತ್ತಿದೆ.
ಇಂತಹ ಆಯುಷ್ಮಾನ್ ಅರೋಗ್ಯ ಕೇಂದ್ರಗಳಿಗೆ ತನ್ನದೇ ಆದ ಸ್ವಂತ ಕಟ್ಟಡಗಳಿಲ್ಲದೆ ಖಾಸಗಿ ಕಟ್ಟಡಗಳನ್ನು ಅವಲಂಬಿತವಾಗಿದೆ ಈಗಾಗಲೇ ಇಂತಹ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಸರಕಾರ ಯೋಚಿಸಿದ್ದು ಹೆಮ್ಮೆಯ ವಿಚಾರವಾಗಿದೆ.
ತಾಲ್ಲೂಕಿನ ಸಂಸೆ, ಕುದುರೆಮುಖ, ಕಾರಗದ್ದೆ, ಕೋಟೆಹೊಳೆ, ಬಾಳೆಹೊಳೆ, ಹಿರೇಬೈಲ್, ಗಂಗನಗುಡಿಗೆ, ಸಂಪಿಗೆಖಾನ್, ಮರಸಣಿಗೆ, ಹಿನಾರಿ ಮುಂತಾದ ಪ್ರದೇಶಗಳಲ್ಲಿ ಆಯುಷ್ಮಾನ್ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮೇಲ್ದರ್ಜೆಗೆ ಏರಿಸಲು ನೂತನ ಕಟ್ಟಡಕ್ಕಾಗಿ ಸರ್ಕಾರ ಭೂಮಿ ಮಂಜೂರು ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಅದೇಶಿಸಿದೆ. ಆದರೆ ಈ ಬಗ್ಗೆ ಎಲ್ಲೂ ಪ್ರಾಸ್ಥಾಪ ಆಗುತ್ತಿಲ್ಲ ಕನಿಷ್ಠ ಭೂಮಿ ಮಂಜೂರು ಮಾಡಲು ಮೀನಾಮೇಷ ಎನಿಸುತ್ತಿದೆ. ಬಡ ಜನರ ಪರವಾದ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕಾದ ಆಡಳಿತವರ್ಗ ಕಡೆಗಣಿಸಿ ಮೂಲೆಗುಂಪು ಮಾಡದೆ ಕೂಡಲೇ ಭೂಮಿ ಮಂಜೂರು ಮಾಡುವಂತೆ ಕಳಸ ತಾಲೂಕು ಹಸಲರು ಸಂಘ ಒತ್ತಾಯಿಸುತ್ತದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.







