
ಕಳಸ ಲೈವ್ ವರದಿ
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀ ವರ್ಧುತ್ಯುತ್ಸವ ಬುಧವಾರ ನಡೆಯಿತು.
೧೯೭೩ರ ಮೇ ೫ರಂದು ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ, ಶ್ರೀ ಉದ್ಬವ ಗಣಪತಿ ಸ್ವಾಮಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು.
ಆ ಪುಣ್ಯ ದಿನದ ವರ್ಧಂತ್ಯುತ್ಸವವನ್ನು ಅಕ್ಷಯ ತದಿಗೆಯ ಬುಧವಾರದಂದು ಶ್ರೀ ಜಗನ್ಮಾತೆಯ ದಿವ್ಯ ಸನ್ನಿಧಿಯಲ್ಲಿ ವಿವಿಧ ಹೋಮಗಳು ಪಾರಾಯಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊ ಂಡಿತು.
ಶ್ರೀಮಾತೆಯ ವರ್ಧಂತ್ಯುತ್ಸವದ ಪ್ರಯುಕ್ತ ಧರ್ಮಕರ್ತರಾದ ಜಿ.ಭೀಮೆಶ್ವರ ಜೋಷಿಯವರಿಂದ ಉದ್ಭವ ಗಣಪತಿ ಸ್ವಾಮಿಗೆ ಮತ್ತು ಶ್ರೀಮಾತೆಗೆ ಮಹಾ ಅಭಿಷೇಕ ನೆರವೇರಿತು. ನಂತರ ಶ್ರೀ ಜಗನ್ಮಾತೆಯ ದಿವ್ಯ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮತಾರಕ ಹೋಮ, ಅನ್ನಪೂರ್ಣ ಮೂಲಮಂತ್ರ ಹೋಮ, ಬಾಲತ್ರಿಪುರ ಸುಂದರಿ ಹೋಮ, ಗಾಯತ್ರಿ ಹೋಮ, ನವಗ್ರಹ ಹೋಮ, ರುದ್ರಹೋಮ, ವೇದ ಪಾರಾಯಣ, ರಾಶಿಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ನಾಟ್ಯ ಮಯೂರಿ ವಿದುಷಿ ಶ್ರೀಮತಿ ಲಕ್ಷ್ಮೀಗುರುರಾಜ್ ಇವರ ಶಿಷ್ಯೆ ವಿದುಷಿ ಕುಮಾರಿ ಅರ್ಪತಾ ಹೆಗಡೆ ಉಡುಪಿ ಇವರಿಂದ ಭರತನಾಟ್ಯ ನಡೆಯಿತು.
