ಕಳಸ ಲೈವ್ ವರದಿ
ಚಲನಚಿತ್ರ ನಿರ್ಮಾಪಕ ಉದ್ಯಮಿ ಬಿ.ವಿ ರವಿ ರೈ ಕಳಸ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮೇ 18ಕ್ಕೆ ಕಳಸ ಚಂದ್ರನಾಥಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವದ ಸಂದರ್ಭದಲ್ಲಿ ನಡೆದ ರಾಜ್ಯ ಮಟ್ಟದ ಜೈನ ಸಾಹಿತ್ಯ ಸಮ್ಮೇಳವನ್ನು ನಡೆಸಲಾಗಿತ್ತು. ಈ ಸಮ್ಮೇಳನದಲ್ಲಿ ಕಳಸದ ಗೀತಾಮಕ್ಕಿ, ಭರತ್ ಕಾಟೀಕಾನ್, ಕನ್ನಡ ರಾಜು ಅವರಿಗೆ ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಬಿ.ವಿ ರವಿ ರೈ ಅವರಿಗೂ ಪ್ರಶಸ್ತಿಯನ್ನು ನೀಡುವುದಾಗಿ ತೀರ್ಮಾಣಿಸಲಾಗಿತ್ತು.ಆದರೆ ಆ ಕಾರ್ಯಕ್ರಮಕ್ಕೆ ರವಿ ರೈ ಗೈರಾಗಿದ್ದರು.ಈ ಹಿನ್ನಲೆಯಲ್ಲಿ ಪ್ರಶಸ್ತಿಯನ್ನು ಶನಿವಾರ ಕಳಸ ತಾಲ್ಲೂಕು ಕಸಾಪ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಗೌರವ ಕಾರ್ಯದರ್ಶಿ ಸುಜಯ ಸದಾನಂದ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಕಸಾಪ ಕಳಸ ಹೋಬಳಿ ಅಧ್ಯಕ್ಷ ಶೇಖರ ಶೆಟ್ಟಿ, ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್, ಶರೀಫ್, ಮಲ್ಲಿಕಾರ್ಜುನ್ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ರೈ ನನ್ನನ್ನು ಗುರುತಿಸಿ ಗೌರವಿಸಿದ ಸಾಹಿತ್ಯ ಪರಿಷತ್ತ್ ಗೆ ಧನ್ಯವಾದಗಳು.ಅಂದಿನ ಕಾರ್ಯಕ್ರಮಕ್ಕೆ ನಾನು ಬರಬೇಕಿತ್ತು. ನನ್ನ ವಯಕ್ತಿಕ ಕಾರಣಗಳಿಂದ ಬರಲು ಸಾದ್ಯವಾಗಿಲ್ಲ ಎಂದು ಹೇಳಿದರು.
