default
ಕಳಸ ಲೈವ್ ವರದಿ
ದ್ವಿತೀಯ ಪಿಯುಸಿ ಪೂರೈಸಿದ ನಂತರ ಅನಿವಾರ್ಯ ಕಾರಣಗಳಿಂದ ಪದವಿ ವಿದ್ಯಾಭ್ಯಾಸ ಮುಂದುವರೆಸಲಾಗದಿದ್ದ ವಿದ್ಯಾರ್ಥಿಗಳಿಗೆ ಇದೀಗ ಅದನ್ನು ಮುಂದುವರೆಸುವ ಉತ್ತಮ ಅವಕಾಶ ಲಭಿಸಿದೆ.
ಆಸಕ್ತರು ತಮ್ಮಲ್ಲಿರುವ ಅಗತ್ಯ ದಾಖಲಾತಿಗಳೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ ಇಲ್ಲಿಗೆ ಖುದ್ದಾಗಿ ಬಂದು ದಾಖಲಾತಿಯನ್ನು ಪಡೆದುಕೊಳ್ಳಬಹುದು.
*ಕಾಲೇಜಿನಲ್ಲಿ ವ್ಯಾಸಂಗಕ್ಕೆ ಲಭ್ಯವಿರುವ ಕೋರ್ಸ್ಗಳು*
*1. ಬಿ.ಎ (ಕಲಾ ವಿಭಾಗ)*
– ಹೆಚ್.ಇ.ಪಿ – ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ
– ಹೆಚ್.ಕೆ.ಜೆ – ಇತಿಹಾಸ, ಕನ್ನಡ, ಪತ್ರಿಕೋದ್ಯಮ
*2. ಬಿ.ಕಾಂ (ವಾಣಿಜ್ಯಶಾಸ್ತ್ರ ವಿಭಾಗ)*
– ವಿಶ್ವವಿದ್ಯಾಲಯದ ಕಡ್ಡಾಯ ವಿಷಯಗಳು
*3. ಬಿ.ಸಿ.ಎ (ಕಂಪ್ಯೂಟರ್ ಅಪ್ಲಿಕೇಷನ್ಸ್)*
– ವಿಶ್ವವಿದ್ಯಾಲಯದ ಕಡ್ಡಾಯ ವಿಷಯಗಳು
– ವಿಜ್ಞಾನ ಅಥವಾ ವಾಣಿಜ್ಯಶಾಸ್ತ್ರದಲ್ಲಿ ಪಿಯುಸಿ ಉತ್ತೀರ್ಣರಾಗಿರಬೇಕು
*ಹೆಚ್ಚಿನ ಮಾಹಿತಿಗಾ ಸಂಪರ್ಕಿಸಿ:*
ಕಾಲೇಜಿನ ದೂರವಾಣಿ ಸಂಖ್ಯೆ: 08263 295233
ಪ್ರಾಂಶುಪಾಲರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ
*ಸೂಚನೆ:* ಪ್ರವೇಶಾತಿಗೆ ಸಂಬಂಧಿಸಿದಂತೆ ಕಾಲೇಜಿನ ಆಡಳಿತದ ತೀರ್ಮಾನವೇ ಅಂತಿಮವಾಗಿರುತ್ತದೆ.
