
ಕಳಸ ಲೈವ್ ವರದಿ
ಕಳಸ ಶ್ರೀ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿಯ ೨೦೨೫-೨೬ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಕಿರಣ ಬ್ರಹ್ಮದೇವ ಬುಧವಾರ ಅಧಿಕಾರ ಸ್ವೀಕರಿಸಿದರು.
ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷರಾದ ಶ್ರೀಮತಿ ಸುಜಯ ಸದಾನಂದ ತನ್ನ ಅಧಿಕಾರವನ್ನು ಕಿರಣ ಬ್ರಹ್ಮದೇವ ಅವರಿಗೆ ಹಸ್ತಾಂತರಿಸಿದರು. ನಿರ್ಗಮಿತ ಕಾರ್ಯದರ್ಶಿ ಅಮಿತ ವಿನಾಯಕ ಕಳೆದ ಎರಡು ವರ್ಷಗಳ ವರದಿಯನ್ನು ಮಂಡಿಸಿ ತನ್ನ ಅಧಿಕಾರವನ್ನು ನೂತನ ಕಾರ್ಯದರ್ಶಿ ಆಶಾ ಗುರುಶೇಟ್ಗೆ ಹಸ್ತಾಂತರಿಸಿದರು.
ಇದರೊAದಿಗೆ ಖಜಾಂಚಿ ಕಲ್ಪನಾ ಅಜಿತ್, ನಿರ್ದೇಶಕರಾಗಿ ಫಾತಿಮಾ ರೆಹಮಾನ್, ಮನೋರಾಧಿನಿ ಧರಣೇಂದ್ರ, ಸುಜಯ ಸದಾನಂದ, ಶೋಭಾ ದೇಸಾಯಿ, ಅಮಿತ ವಿನಾಯಕ, ಮೇನಕ ಹೆಬ್ಬಾರ್, ಜಾನಕಿ ಸುಂದರೇಶ್ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು.
ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಒಳ್ಳೆಯ ರೀತಿಯಲ್ಲಿ ಮಹಿಳಾ ಮಂಡಳಿ ಸೇರಿದಂತೆ ಕಳಸದ ಜನತೆ ನನಗೆ ಸಹಕಾರ ನೀಡಿದ್ದಾರೆ.ಮುಂದಿನ ಅಧ್ಯಕ್ಷರಿಗೂ ಇದೇ ಸಹಕಾರವನ್ನು ನೀಡಬೇಕು.ಹಾಗೂ ಮಂಡಳಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ಸೇರ್ಪಡೆ ಆಗಬೇಕು ಎಂದು ಹೇಳಿ ಎರಡು ವರ್ಷ ಸಹಕಾರ ನೀಡಿದವರನ್ನು ನೆನಪಿಸಿಕೊಂಡರು.

