ಕಳಸ ಲೈವ್ ವರದಿ
ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಬಸ್ ಪ್ರಯಾಣದ ವೆಚ್ಚವನ್ನು ಪುನಾರಂಭಿಸುವAತೆ ಹೊರನಾಡು, ಚಿಕ್ಕನಕೂಡಿಗೆ, ಬಲಿಗೆ, ತುರ, ಕೆಸುವಿನ ಕೊಂಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಗ್ರಾಮದ ವಿದ್ಯಾರ್ಥಿಗಳು ಹೊರನಾಡು ಮತ್ತು ಕಳಸದ ಶಾಲಾ ಕಾಲೇಜುಗಳಿಗೆ ಸ್ಥಳೀಯ ಖಾಸಾಗಿ ಬಸ್ಸಿನ ಮೂಲಕ ಪ್ರತಿನಿತ್ಯ ಸಂಚಾರ ಮಾಡುತ್ತಿದ್ದರು.ಇದರ ವೆಚ್ಚವನ್ನು ಕಳೆದ ಎರಡು ವರ್ಷಗಳಿಂದ ಅರಣ್ಯ ಇಲಾಖೆಯಿಂದ ನೀಡಲಾಗುತ್ತಿತ್ತು.
ಆದರೆ ಅರಣ್ಯ ಇಲಾಖೆಯು ಹಿಂದಿನ ವರ್ಷದ ಹಣವನ್ನು ಬಸ್ಸು ಮಾಲಿಕರಿಗೆ ಕೊಡಲು ಬಾಕಿ ಉಳಿಸಿರುವುದರಿಂದ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲು ಅಸಾದ್ಯವೆಂದು ಬಸ್ಸಿನ ಅಡಳಿತ ಮಂಡಳಿ ತಿಳಿಸುವುದರಿಂದ ಪ್ರಸ್ತುತ ವರ್ಷದಿಂದ ಈ ವೆಚ್ಚವನ್ನು ಮಕ್ಕಳೇ ಭರಿಸುತ್ತಿದ್ದಾರೆ.
ಎರಡು ವರ್ಷದಿಂದ ಇಲಾಖೆಯ ಮುಖಾಂತರ ಕಲ್ಪಿಸುತ್ತಿದ್ದ ಉಚಿತ ಪ್ರಯಾಣದ ವ್ಯವಸ್ಥೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗುತ್ತಿತ್ತು.ಇಲಾಖೆ ಏಕಾಏಕಿ ಈ ಸೌಲಭ್ಯವನ್ನು ನಿಲ್ಲಿಸುವುದರಿಂದ ಈ ಭಾಗದ ನೂರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿರುತ್ತದೆ.
ಆದ್ದರಿಂದ ಈ ಹಿಂದಿನಿAತೆಯೇ ಈ ಸೌಲಭ್ಯವನ್ನು ಮುಂದುವರೆಸಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಅವರಿಗೆ ಮನವಿ ಪತ್ರವನ್ನು ಗ್ರಾಮಸ್ಥರು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಳಸದ ಪ್ರಮುಖ ಮುಖಂಡರುಗಳಾದ ಜಿ.ಕೆ.ಮಂಜಪ್ಪಯ್ಯ, ಎಂ.ಎ ಶೇಷಗಿರಿ, ಬಿ.ವಿ.ರವಿ ರೈ, ಹೆಚ್.ಡಿ.ಜ್ಷಾಲನಯ್ಯ, ಗ್ರಾಮಸ್ಥರಾದ ಸವಿಂಜಯ ಜೈನ್, ಸುವರ್ಣಮ್ಮ, ಅರ್ಕಕೀರ್ತಿ, ಇತರರು ಇದ್ದರು.


