ಕಳಸ ಲೈವ್ ವರದಿ
ಹೊರನಾಡು ದೇವಸ್ಥಾನದ ವ್ಯವಸ್ಥಾಪಕರಾದ ಶೇಷಾದ್ರಿ ಅವರಿಗೆ ಕಳಸ ರೋಟರಿ ಸಂಸ್ಥೆಯಿAದ ಸೇವಾ ಶ್ರೇಷ್ಠ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹೊರನಾಡು ದೇವಸ್ಥಾನದಲ್ಲಿ ಕೆಲ ದಶಕಗಳಿಂದ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಒಬ್ಬ ಸಾಮಾಣ್ಯ ಕೆಲಸಗಾರರಿಂದ ಹಿಡಿದು ಕಚೇರಿಯಲ್ಲಿರುವ ಎಲ್ಲರನ್ನೂ ಒಂದೇ ದೃಷ್ಠಿಯಿಂದ ನೋಡುವ ಮತ್ತು ಬರುವಂತ ಪ್ರತಿಯೊಬ್ಬ ಭಕ್ತರಿಗೂ ಉತ್ತಮ ಸೇವೆ ಸಿಗುವಂತೆ ನೋಡಿಕೊಂಡು ತವರು ಮನೆಗೆ ಬಂದ ಅನುಭವವನ್ನು ನೀಡಿ ಪ್ರತಿಯೊಬ್ಬರಿಗೂ ಹತ್ತಿರವಾಗುತ್ತಿದ್ದಂತ ಬಲು ಅಪರೂಪದ ಪ್ರಾಮಾಣಿಕ ವ್ಯಕ್ತಿತ್ವದ ಕಾರ್ಯದಕ್ಷತೆ ಇವರದ್ದು. ಸರಳ ಸಜ್ಜನಿಕೆಯ ಶಿಸ್ತುಭದ್ಧ ವಿಶಿಷ್ಠ ಸೇವಾ ಮನೋಭಾವನೆಯಿಂದ ಹೊರನಾಡು ಕ್ಷೇತ್ರಕ್ಕೆ ಸಲ್ಲಿಸಿದ್ದ ಇವರ ಕೊಡುಗೆ ಅಪಾರ.
ಇವರ ಸೇವಾ ನಿಷ್ಠೆಯನ್ನು ಗುರುತಿಸಿ ಕಳಸ ರೋಟರಿ ಸಂಸ್ಥೆಯು ತಮ್ಮ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ, ರೋಟರಿ ಸಹಾಯಕ ರಾಜ್ಯಪಾಲ ರಾಜಗೋಪಾಲ ಜೋಷಿ, ರೋಟರಿ ಅಧ್ಯಕ್ಷ ಮಹೇಂದ್ರ, ಕಾರ್ಯದರ್ಶಿ ವಿಶಾಲ್, ಇನ್ನರ್ ವೀಲ್ ಅಧ್ಯಕ್ಷೆ ಶ್ರೀವಾಣಿ, ಕಾರ್ಯದರ್ಶಿ, ನಿತ್ಯಾ ಇತರರು ಇದ್ದರು.
