

ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಪ್ರೇಮಲತಾ ಅವರನ್ನು ಬೀಳ್ಕೊಡಲಾಯಿತು.
ಕಲಶೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಉತ್ತಮವಾಗಿ ಸಹಕರಿಸಿ ದೇವಸ್ಥಾನದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ.ತನ್ನ ಆರೋಗ್ಯ ಸಮಸ್ಯೆಯಿಂದ ಎರಡು ತಿಂಗಳು ರಜೆಯ ಮೇಲೆ ತೆರಳಿದ್ದು, ಇದೇ ತಿಂಗಳ ಕೊನೆಯಲ್ಲಿ ನಿವೃತ್ತಿಯನ್ನು ಕೂಡ ಪಡೆಯಲಿದ್ದಾರೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೆಂಕಟಸುಬ್ಬಯ್ಯ ಹೇಳಿದರು.
ಗೌರವ ಸ್ವೀಕರಿಸಿ ಮಾತನಾಡಿದ ಎಸ್.ಪ್ರೇಮಲತಾ ಕಳಸ ಅನ್ನುವ ಸ್ವರ್ಗದಲ್ಲಿ ನಾನು ಕೆಲಸ ಮಾಡಿದ ಮತ್ತು ನನ್ನ ನಿವೃತ್ತಿ ಸಂದರ್ಭದಲ್ಲಿ ಕಲಶೇಶ್ವರನ ಸೇವೆ ಮಾಡಲು ಸಿಕ್ಕಿದ್ದು ನನ್ನ ಭಾಗ್ಯ.ಇಲ್ಲಿಯ ಎಲ್ಲಾ ಸಿಬ್ಬಂದಿಗಳು ಕೂಡ ತಮ್ಮ ಕುಟುಂಬದ ಓರ್ವ ಸದಸ್ಯರಂತೆ ನನ್ನನ್ನು ನೋಡಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾವ್ಯ,ಸಮಿತಿ ಸದಸ್ಯರಾದ ರಂಗನಾಥ್, ಕಾರ್ತಿಕ್ ಶಾಸ್ತಿçÃ, ಸತೀಶ್ ಕಲ್ಲಾನೆ, ಗೀತಾ ಮಕ್ಕಿಮನೆ, ಶ್ರೀದರ್ ಸಿಬ್ಬಂದಿಗಳಾದ ಸತೀಶ್, ಅನುಸೂಯ, ಜಗದೀಶ್ ಭಟ್ ಇದ್ದರು
