
ಕಳಸ ಲೈವ್ ವರದಿ
ಕಳಸ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ಅಂತಿಮ ಪದವಿ ಫಲಿತಾಂಶ ಪ್ರಕಟಗೊಂಡಿದ್ದು, ಅತ್ಯುತ್ತಮ ಸಾಧನೆ ದಾಖಲಾಗಿದೆ. ಬಿ.ಎ ಅಂತಿಮ ಪದವಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಶೇಕಡಾ 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 19 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ.
ಬಿ.ಕಾಂ ಪದವಿಯಲ್ಲಿಯೂ ಕಾಲೇಜಿಗೆ ಉತ್ತಮ ಫಲಿತಾಂಶ ದೊರಕಿದ್ದು, ಶೇಕಡಾ 94 ಫಲಿತಾಂಶ ದೊರಕಿದೆ. ಪರೀಕ್ಷೆ ಬರೆದ 33 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯನ್ನು, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಎಸ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಲೇಜು ಅಭಿವೃಧ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ಅವರು ಈ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂಧಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ “ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಅಧ್ಯಾಪಕರ ಉತ್ತಮ ಮಾರ್ಗದರ್ಶನದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ.
2024-25ನೇ ಸಾಲಿನ ಉನ್ನತ ಶ್ರೇಣಿ ವಿದ್ಯಾರ್ಥಿಗಳ ವಿವರ:
ಬಿ.ಎ ಪದವಿ ಟಾಪರ್ಗಳು
ಪ್ರಥಮ ಸ್ಥಾನ: ಕು. ಅಂಕುಶ ಜೆ., ಶೇ. 92.42 ಫಲಿತಾಂಶ
ದ್ವಿತೀಯ ಸ್ಥಾನ: ಕು. ನಿಶ್ಮಿತಾ ಎಸ್., ಶೇ. 91.07 ಫಲಿತಾಂಶ
ಬಿ.ಕಾಂ ಪದವಿ ಟಾಪರ್ಗಳು
ಪ್ರಥಮ ಸ್ಥಾನ: ಕು. ಅಪೂರ್ವ., ಶೇ. 87.57 ಫಲಿತಾಂಶ
ದ್ವಿತೀಯ ಸ್ಥಾನ: ಕು. ಇಂಚರಾ ಡಿ.ಎಲ್., ಶೇ. 86.28 ಫಲಿತಾಂಶ