
ಕಳಸ ಲೈವ್ ವರದಿ
ಕಡೂರುನಲ್ಲಿ ಇದೇ ತಿಂಗಳ 12ರಂದು ನಡೆಯಲಿರುವ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಳಸದ ಇತಿಹಾಸ ಸಂಶೋಧಕ, ಸಾಹಿತಿ ಶ್ರೀ ಪಾಂಡುರ0ಗ ಅವರಿಗೆ “ಸಾಹಿತ್ಯ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಕಡೂರಿನ ಶ್ರೀ ಕಟ್ಟೆ ಹೊಳೆಯಮ್ಮ ದೇವಾಲಯದ ಆವರಣ, ಪಟ್ಟಣಗೆರೆ-ಕುರುಬಕೆರೆ ಎಂಬಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯಲಿದೆ
ಪಾಂಡುರ0ಗ ಅವರು ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆ, ಇತಿಹಾಸ ಸಂಶೋಧನೆಯ ಜೊತೆಯಲ್ಲಿ ಸಂರಕ್ಷಣೆ, ಅಧ್ಯಯನ, ಪ್ರಕಟಣೆಗಳನ್ನು ಮಾಡುವುದರ ಮುಖಾಂತರ ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ನೀಡಿದ ಅವರ ಕೊಡುಗೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.
ಸಮ್ಮೇಳನದ ಅಧ್ಯಕ್ಷತೆಯನ್ನು ವಿದುಷಿ ಡಾ.ಪಿ.ಹೆಚ್. ವಿಜಯಲಕ್ಷ್ಮಿ ವಹಿಸಲಿದ್ದು, ಕ.ಸಾಪ.ರಾಜ್ಯಾಧ್ಯಕ್ಷ ನಾಡೋಜ. ಡಾ. ಮಹೇಶ್ ಜೋಷಿ, ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ,ತಾಲ್ಲೂಕು ಅಧ್ಯಕ್ಷ ಚಿಕ್ಕನಲ್ಲೂರು ಎಸ್ ಪರಮೇಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಕವಿಗಳು, ಶಿಕ್ಷಕರು, ಯುವ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಕವನ ವಾಚನ, ಪುಸ್ತಕ ಬಿಡುಗಡೆ, ಗೋಷ್ಠಿಗಳು ನಡೆಯಲಿದೆ.
ಪಾಂಡುರoಗ ಅವರಿಗೆ ಈ ಹಿಂದೆ ಕ.ಸಾ.ಪ ದಿಂದ ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸಾಹಿತ್ಯ ಮತ್ತು ಇತಿಹಾಸ ಸಂಶೋಧನೆ ಪ್ರಯಾಣವು ಗ್ರಾಮೀಣ ಬದುಕಿನ ನುಡಿಗಟ್ಟುಗಳಿಂದ ಪ್ರೇರಿತವಾಗಿದ್ದು, ಅವರ ಸಾಹಿತ್ಯ ಕ್ಷೇತ್ರ ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿರುವುದು ವಿಶಿಷ್ಟ. ಈ ಪ್ರಶಸ್ತಿ ಅವರು ಸಾಹಿತ್ಯ ಸೇವೆಗೆ ಸಿಕ್ಕಿರುವ ಸಾರ್ಥಕ ಮಾನ್ಯತೆ ಎನ್ನಬಹುದು.