
ಕಳಸ ಲೈವ್ ವರದಿ
ಮಾನವೀಯತೆ ನಿಧಾನವಾಗಿ ಮಸುಕಾಗುತ್ತಿರುವ ಸಮಾಜದಲ್ಲಿ ಪ್ರಾಣಿಗಳ ಮೇಲಿನ ನಿರ್ಲಕ್ಷ್ಯ ಮತ್ತೆ ಒಂದು ನೋವು ಹುಟ್ಟಿಸುತ್ತದೆ. ಸಾಕಿದ ಹೆಣ್ಣು ನಾಯಿ ಮರಿಗಳಿಗೆ ಜನ್ಮ ನೀಡಿದ ತಕ್ಷಣ, ಕೆಲವರು ಆ ಮರಿಗಳನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಹೋಗುತ್ತಿರುವುದು ಮಾನವನ ಕ್ರೂರತೆಯನ್ನು ತೋರಿಸುತ್ತದೆ.
ಈ ಹೆಣ್ಣು ನಾಯಿಯನ್ನು ಮನೆಯಲ್ಲಿ ಸಾಕುತ್ತಾರೆ ಆದರೆ ಅದು ಮರಿಗಳಿಗೆ ಜನ್ಮ ನೀಡಿದ ಬಳಿಕ ಅವುಗಳಿಗೆ ಆಶ್ರಯ ನೀಡಲು ತೊಂದರೆ ಎನ್ನುವ ಕಾರಣದಿಂದ ಹೆಣ್ಣು ಮರಿಗಳನ್ನು ಕಾಡಿನ ದಾರಿ ಅಥವಾ ರಸ್ತೆಯ ಪಕ್ಕ ಬಿಟ್ಟುಹೋಗುತ್ತಾರೆ ತಾಯಿ ನಾಯಿ ಮರಿಗಳ ಹಿಂದೆ ಓಡಿ ಕಿರುಚುತ್ತಾ ಬಂದರೂ, ಅವುಗಳನ್ನು ಬಿಟ್ಟುಹೋದ ವಾಹನದ ಧೂಳಿನಲ್ಲಿ ಅದರ ಕಣ್ಣೀರು ಮಾತ್ರ ಉಳಿಯುತ್ತದೆ.
ಈಗೆ ಬಿಟ್ಟುಹೋದ ಹಾಲು ಕುಡಿಯುವ ಆ ಎಳೆಯ ಮಾತಾಡಲಾರದ ಆ ಜೀವಗಳು ತಾಯಿಯ ಹಾಲಿಗೆ, ತಾಯಿಯ ತಾಪಕ್ಕೆ ಬಯಸುತ್ತಿವೆ. ರಸ್ತೆ ಬದಿಯಲ್ಲಿ ನಡುಗುತ್ತಾ, ಭಯದಿಂದ ಕೂಗುತ್ತಾ ಇರುವ ಆ ಚಿಕ್ಕ ಪುಟ್ಟ ಮರಿಗಳು, ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ರಸ್ತೆಯಲ್ಲೋ ಅಥವಾ ಕಾಡು ದಾರಿಯಲ್ಲಿ ಅಡ್ಡಾಡಿ ಅಹಾರ ಸಿಗದೆಯೋ, ವಾಹನದ ಚಕ್ರಗಳಿಗೆ ಸಿಲುಕಿಯೋ ಅಥವಾ ಇನ್ಯಾವುದೋ ಪ್ರಾಣಿಗಳ ಬಾಯಿಗೆ ತುತ್ತಾಗಿ ತನ್ನ ಜೀವವನ್ನು ಕಳೆದುಕೊಳ್ಳುತ್ತವೆ.
“ಪ್ರತಿಯೊಂದು ಪ್ರಾಣಿಗೂ ಬದುಕುವ ಹಕ್ಕು ಇದೆ. ನಾವು ಸಾಕಿದರೆ ಅದು ನಮ್ಮ ಹೊಣೆಗಾರಿಕೆ. ಬಿಡುವ ಹಕ್ಕಿಲ್ಲ,”
ಮೌನ ಜೀವಿಗಳ ಹಕ್ಕುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ, ನಾಯಿ ಮರಿಗಳನ್ನು ರಸ್ತೆ ಬದಿಯಲ್ಲಿ ಬಿಡುವ ಮುನ್ನ ಆ ಜೀವಿಯ ಬಗ್ಗೆ ಒಮ್ಮೆ ಯೋಚಿಸಿ ಎಂಬುದೇ ನಮ್ಮ ಆಶಯ.