
ಕಳಸ ಲೈವ್ ವರದಿ
ಕಳಸ ಸಮೀಪದ ಗುಮ್ಮನಕಾನು ತೋಟದಲ್ಲಿ ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಯುವಕ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮೃತನನ್ನು ಮೌರುದ್ಧಿನ್(16) ಎಂದು ಗುರುತಿಸಲಾಗಿದೆ. ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಕುಟುಂಬದ ಸದಸ್ಯ.
ಮಾಹಿತಿಯ ಪ್ರಕಾರ ಮೌರುದ್ದಿನ್ ಮತ್ತು ಮತ್ತೊಬ್ಬ ಯುವಕ ಇಬ್ಬರೂ ಮೊಬೈಲ್ ಚಾರ್ಜ್ಗೆ ಹಾಕಿ ಮಲಗಿದ್ದರು. ಬೆಳಗಿನ ಜಾವ ಮಳೆ ಹಾಗೂ ಮಿಂಚು ನಡುವೆ ಸಿಡಿಲು ಬಡಿದಿದ್ದು, ಅದರಿಂದ ಮೌರುದ್ದಿನ್ ತೀವ್ರ ಆಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ.
ತಕ್ಷಣ ಸ್ಥಳೀಯರು ಹಾಗೂ ಹಿರೇಬೈಲಿನ ಸಾಮಾಜಿಕ ಕಾರ್ಯಕರ್ತ ಶರೀಫ್ ಅವರ ನೆರವಿನಿಂದ ಯುವಕನನ್ನು ತಕ್ಷಣ ಕಳಸ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ದಾರಿಯ ಮಧ್ಯೆಯೇ ಮೌರುದ್ದಿನ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.