
ಕಳಸ ಲೈವ್ ವರದಿ
ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಇವರ ವತಿಯಿಂದ 71ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯು ವಿಜ್ಞಾನ ವಿಭಾಗದ ತೇಜಾ ಕೆ.ವಿ. ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ತೇಜಾ ಕೆ.ವಿ. ಅವರು ವನ್ಯಜೀವಿ, ಪರಿಸರ ಸಂರಕ್ಷಣೆ ಹಾಗೂ ಜೀವ ವೈವಿಧ್ಯತೆ ಕುರಿತ ತಮ್ಮ ವಿಶಿಷ್ಟ ಜ್ಞಾನವನ್ನು ಪ್ರದರ್ಶಿಸಿದರು. ವಿಜ್ಞಾನ ಮನೋವೃತ್ತಿಯೊಂದಿಗೆ ವನ್ಯಜೀವಿ ಸಂರಕ್ಷಣೆಯ ಮೇಲಿನ ಆಸಕ್ತಿಯು ಇವರ ಸಾಧನೆಯನ್ನು ಇನ್ನಷ್ಟು ಹೊಳಪುಗೊಳಿಸಿದೆ.
ಸಮಾರಂಭದಲ್ಲಿ ತೇಜಾ ಕೆ.ವಿ. ಇವರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡುವ ಮೂಲಕ ಗೌರವಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಎಸ್.ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು ಮತ್ತು ಎಲ್ಲಾ ಉಪನ್ಯಾಸಕರು ತೇಜಾ ಕೆ.ವಿ. ಇವರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು.

