
ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ತನ್ವಿರ್ ನ್ಯಾಮತಿ ಪದವಿ ಸ್ವೀಕರಿಸಿದರು.
ಕಳಸ ಜೆಸಿಐ ನೂತನ ಅಧ್ಯಕ್ಷರಿಗೆ ವಲಯಾಧ್ಯಕ್ಷ ಪ್ರಜ್ವಲ್ ಜೈನ್ ಪ್ರಮಾಣ ವಚನ ಭೋದಿಸಿದರು.ನಿರ್ಗಮಿತ ಅಧ್ಯಕ್ಷ ಸುಧಾಕರ್ ನಿಯೋಜಿತ ಅಧ್ಯಕ್ಷ ತನ್ವೀರ್ ನ್ಯಾಮತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ನೂತನ ಸದಸ್ಯರಿಗೆ ವಲಯ ಉಪಾಧ್ಯಕ್ಷ ದರ್ಶನ್ ಪ್ರಮಾಣ ವಚನ ಭೋದಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಜಯಪ್ರಕಾಶ್, ಖಚಾಂಚಿ ವಸಂತ್, ಉಪಾಧ್ಯಕ್ಷರಾಗಿ ಮುರುಳೀದರ, ಸಂತೋಷ್ ಮೆಣಸೂರು, ಮಾರುತೇಶ್, ಶಿವಪ್ರಸಾದ್, ಮಧು ಗೌಡ, ದೇವರಾಜ್, ನಿರ್ದೇಶಕರಾಗಿ ವಿಜಯ ಕುಮಾರ್, ಸುನೀಲ್, ನಝೀರ್ಖಾನ್, ನಂದನ್, ಪ್ರಭು ಅಧಿಕಾರ ಸ್ವೀಕರಿಸಿದರು.

ನಿಖಟ ಪೂರ್ವ ಅಧ್ಯಕ್ಷರಾಗಿದ್ದ ಶ್ರೀಕಾಂತ್ ಅವರನ್ನು ಪೂರ್ವಧ್ಯಕ್ಷರ ತಂಡಕ್ಕೆ ಕೆ.ಸಿ ಮಹೇಶ್ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಕಳಸ ತಾಲ್ಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ವಲಯ ಬೆಳವಣಿಗೆ ಮತ್ತು ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಇದ್ದರು.
