ಕಳಸ ಲೈವ್ ವರದಿ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಳಸ ಪ್ರಖಂಡದಿAದ ನವೆಂಬರ್ 30ರ ಭಾನುವಾರದಂದು ಶ್ರೀ ದತ್ತ ಜಯಂತಿ ಮತ್ತು ದತ್ತಮಾಲಾ ಅಭಿಯಾನದ ಅಂಗವಾಗಿ ಕಳಸದಲ್ಲಿ ಶ್ರೀ ದತ್ತಹೋಮ ಹಾಗೂ ಸಂಕೀರ್ತನಾ ಯಾತ್ರೆ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 9:30 ಕ್ಕೆ ಕಳಸದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದತ್ತ ಹೋಮ, ಮಧ್ಯಾಹ್ನ 1:00 ಗಂಟೆಗೆ ಪ್ರಸಾದ ಭೋಜನ ಇರುತ್ತದೆ.
ಮಧ್ಯಾಹ್ನ 2:00 ಗಂಟೆಗೆ ಕಳಸದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯ ಸಂಕೀರ್ತನಾ ಯಾತ್ರೆಯನ್ನು ಆಯೋಜಿಸಲಾಗಿದೆ.
ಸಂಜೆ 6:00 ಗಂಟೆಗೆ ಕಳಸದ ಕೆ. ಎಂ. ರಸ್ತೆ ಸರ್ಕಲ್ ಬಳಿ ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ಬಜರಂಗದಳ ಕರ್ನಾಟಕ ದಕ್ಷಣ ಪ್ರಾಂತ ಸಹ ಸಂಯೋಜಕರಾ ಬಿ.ಗೋವರ್ಧನ್ ಅವರಿಂದ ದಿಕ್ಸೂಚಿ ಭಾಷಣ ಇರಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಪ್ರಾಂತದ ಪ್ರಮುಖರು ಆಗಮಿಸಲಿದ್ದಾರೆ.
ಸಂಕೀರ್ತನಾ ಕಾರ್ಯಕ್ರಮದ ಮೆರವಣಿಗೆಯಲ್ಲಿ ಮುದ್ದು ಮಕ್ಕಳ ಕೃಷ್ಣ ವೇಷ, ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ, ಗುರಿಪಳ್ಳ ಉಜಿರೆ ಇವರಿಂದ ಕುಣಿತ ಭಜನೆ ಹಾಗೂ ನಾಸಿಕ್ ಬ್ಯಾಂಡ್ನ ವಿಶೇಷ ಆಕರ್ಷಣೆ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ದತ್ತ ಜಯಂತಿ ಆಚರಣೆಯ ಪುಣ್ಯ ಕಾರ್ಯಕ್ರಮಗಳಲ್ಲಿ ಸಮಸ್ತ ಧರ್ಮ ಬಾಂಧವರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಳಸ ಘಟಕದ ಸಂಘಟಕರು ಮನವಿ ಮಾಡಿದ್ದಾರೆ.
