ಕಳಸ ಲೈವ್ ವರದಿ
ಚಲಿಸುತ್ತಿರುವ ಬೈಕ್ ನ ಹಿಂಬದಿ ಕುಳಿತಿದ್ದ ಸವಾರ ಕೆಳಗೆ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಕಳಸ ಪಟ್ಟಣದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ದ0ದಾಡಿ ಸೈಟ್ ಮಾವಿನಕೆರೆ ನಿವಾಸಿ ಕುಮಾರ್ (35) ಮೃತಪಟ್ಟ ದುರ್ದೈವಿ.
ಇವರು ಶನಿವಾರ ರಾತ್ರಿ ಸುಮಾರು 9:00 ಗಂಟೆಯ ವೇಳೆಗೆ ತಮ್ಮ ಸ್ನೇಹಿತ ರಾಘವೇಂದ್ರ ಎಂಬುವವರ ಜೊತೆ ಅವರ ಬೈಕ್ ನಲ್ಲಿ ತೆರಳುತ್ತಿದ್ದರು. ಕಳಸ ಪಟ್ಟಣದ ಮಹಾವೀರ ರಸ್ತೆ ಬಳಿಯ ಚಂದನ್ ಬಾರ್ನಿಂದ ಕಚ್ಚಾ ರಸ್ತೆಯ ಮೂಲಕ ಮುಖ್ಯ ರಸ್ತೆಗೆ ಬರುತ್ತಿದ್ದರು.
ಈ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಹಿಂಬದಿ ಕುಳಿತಿದ್ದ ಕುಮಾರ್ ಅವರು ಏಕಾಏಕಿ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿ0ದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಾಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಕೊನೆಯುಸಿರೆಳೆದಿದ್ದಾರೆ.
ಮೃತರ ತಾಯಿ ಯಶೋದಾ ಅವರು ಈ ಸಂಬ0ಧ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಕುಮಾರ್ ಅವರಿಗೆ ಪತ್ನಿ ಸುಜಾತ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ.
