ಕಳಸ ಲೈವ್ ವರದಿ
ಇಲ್ಲಿನ ಪ್ರತಿಷ್ಠಿತ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ (ರಿ.) ಇದರ 40ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಜನವರಿ 12ರ ಸೋಮವಾರದಂದು ಸಂಜೆ 6 ಗಂಟೆಗೆ ಕಳಸದ ಶ್ರೀ ದುರ್ಗಾಮಂಟಪದಲ್ಲಿ ಬಹಳ ವೈಭವದಿಂದ ಜರುಗಲಿದೆ.
ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಿರಣ ಬ್ರಹ್ಮದೇವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭದಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀಮತಿ ನಯನಾ ಮೋಟಮ್ಮ (ಮಾನ್ಯ ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ), ಶ್ರೀಮತಿ ವೈದೇಹಿ (ಖ್ಯಾತ ಸಾಹಿತಿಗಳು, ಉಡುಪಿ) ಶ್ರೀಮತಿ ಪ್ರತಿಭಾ ಕುಳಾಯಿ (ಸಮಾಜ ಸೇವಕರು, ಮಂಗಳೂರು) ಇವರುಗಳು ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಸಂಜೆ 7 ಗಂಟೆಯಿAದ ಮಹಿಳಾ ಮಂಡಳಿಯ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ನೃತ್ಯ, ಕೋಲಾಟ, ನೃತ್ಯ ರೂಪಕ, ಸಮೂಹ ಗಾನ, ಗೀತ ಗಾಯನ, ಫ್ಯಾಷನ್ ಶೋ ಹಾಗೂ ಮೂಕಾಭಿನಯಗಳು ನೋಡುಗರನ್ನು ರಂಜಿಸಲಿವೆ.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಪ್ರೇಮ್ಕುಮಾರ್ ಕೆಳಗಂಡಿ ಅವರ ನಿರ್ದೇಶನದಲ್ಲಿ ಮಂಡಳಿಯ ಸದಸ್ಯರಿಂದ “ನರಕದಲ್ಲೊಂದು ನಾಟಕ” ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಂಡಳಿಯ ಅಧ್ಯಕ್ರಾದ ಕಿರಣ ಬ್ರಹ್ಮದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
