
ಕಳಸ ಲೈವ್ ವರದಿ
ಬಾಳೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಅತ್ಯಂತ ಸಡಗರ-ಸಂಭ್ರಮದಿAದ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೇಸಿಗೆ ರಜೆಯ ನಂತರ ಶಾಲೆಯ ಪ್ರಾರಂಭದ ಮೊದಲ ದಿನದಂದೇ ಮಕ್ಕಳು ಅತ್ಯಂತ ಉತ್ಸಾಹ ಮತ್ತು ಲವಲವಿಕೆಯಿಂದ ಶಾಲೆಯತ್ತ ಹೆಜ್ಜೆ ಹಾಕಿದರು. ಶಿಕ್ಷಕರು ಮೊದಲೇ ಶಾಲೆಯನ್ನು ತಳಿರು ತೋರಣಗಳಿಂದ ಅಂದವಾಗಿ ಸಿಂಗರಿಸಿ, ಮಕ್ಕಳ ಆಕರ್ಷಕ ಸ್ವಾಗತಕ್ಕಾಗಿ ಸಜ್ಜಾಗಿದ್ದರು. ಶಾಲೆಗೆ ಆಗಮಿಸಿದ ಎಲ್ಲಾ ಮಕ್ಕಳಿಗೆ ಶಿಕ್ಷಕರು ಆತ್ಮೀಯವಾಗಿ ಪುಷ್ಪ ನೀಡಿ, ಪ್ರೀತಿಯಿಂದ ಬರಮಾಡಿಕೊಂಡರು. ಶಾಲೆಯ ಮೊದಲ ದಿನವನ್ನು ಸಿಹಿ ಸವಿಯುವ ಮೂಲಕ ಮಕ್ಕಳು ಅತ್ಯಂತ ಸಂತೋಷದಿAದ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಕುಮಾರ ಎಸ್ ಕೆ, ಎಸ್ಡಿಎಂಸಿ ಅಧ್ಯಕ್ಷರಾದ ರವಿ ಕೆ, ಸಹ ಶಿಕ್ಷಕರುಗಳಾದ ಸುಂದರಮ್ಮ ಹಾಗೂ ಶಿವಕುಮಾರ್ ಎಚ್ ಕೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದರು.
ದಾಖಲಾತಿ ಆಂದೋಲನದ ಮೂಲಕ ಶಾಲಾ ವಯಸ್ಸಿನ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂಕಲ್ಪದೊAದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಶಾಲೆಯಲ್ಲಿ ಅತ್ಯಂತ ಯಶಸ್ವಿ ಚಾಲನೆ ನೀಡಲಾಯಿತು
