ಕಳಸ:ಕಳಸ ತಾಲ್ಲೂಕಿನ ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಮೇ 18 ರಂದು ಸಾಮೂಹಿಕ ವಿವಾಹ ನಡೆಯಲಿದೆ ಎಂದು ದೇವಸ್ಥಾನದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಮೊದಲು ನೋಂದಾಯಿಸಿದ 50 ಜೋಡಿಗಳಿಗೆ ವಿವಾಹಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.ಅಪೇಕ್ಷಿತ ವಧು-ವರರು ಸೂಕ್ತ ದಾಖಲೆಯೊಂದಿಗೆ ಮೇ 12 ರೊಳಗೆ ಅರ್ಜಿ ಸಲ್ಲಿಸಬೇಕು ಮಾಹಿತಿಗೆ(9448282410, 9448282424) ಸಂಪರ್ಕಿಸಬಹುದು.