ಕಳಸ ಲೈವ್ ವರದಿ
ತಾಲೂಕಿನ ಹಲವರು ರೈತರ (ಬಗರ್ ಹುಕುಂ) ಫಾರಂ ನಂ. 53ರಲ್ಲಿ ಮಂಜೂರಾದ ಜಮೀನಿನ ಪಹಣಿಗಳು ಈಗಾಗಲೇ ವಜಾಗೊಂಡಿರುವುದು ಹಾಗೂ ಅರಣ್ಯ ಇಲಾಖೆಯ 4/1 ನೋಟಿಫಿಕೇಶನ್ನಿಂದಾಗಿ ಈ ಭಾಗದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಯ ಕುರಿತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ನ್ಯಾಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲು ‘ರೈತ ಹಿತರಕ್ಷಣಾ ವೇದಿಕೆ, ಕಳಸ’ ವತಿಯಿಂದ ದಿನಾಂಕ: 18-05-2026, ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಯ ಸಭಾಂಗಣ, ಕಳಸ ಹಾಗೂ ದಿನಾಂಕ: 23-05-2026, ಶನಿವಾರಬೆಳಿಗ್ಗೆ 11:00 ಗಂಟೆಗೆ ಮೂಡಿಗೆರೆ ಎರಡು ಪ್ರಮುಖ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮೂಡಿಗೆರೆ ಭಾಗದ ಕೆಲವು ರೈತ ಮುಖಂಡರು ಮತ್ತು ಕೃಷಿಕರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಫಾರಂ 53ರಲ್ಲಿ ವಜಾಗೊಂಡ ಪ್ರಕರಣಗಳ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಿಸಿ, ಸೂಕ್ತ ರೀತಿಯ ವಾದ ಮಂಡಿಸಿ ಈಗಾಗಲೇ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಇದೇ ಮಾದರಿಯಲ್ಲಿ ಕಳಸ ಭಾಗದ ಸಂತ್ರಸ್ತ ರೈತರಿಗೂ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಈ ಸಭೆಗಳನ್ನು ಆಯೋಜಿಸಲಾಗಿದೆ.
ಆದ್ದರಿಂದ ಕಳಸ ಮತ್ತು ಸುತ್ತಮುತ್ತಲಿನ ಭಾಗದ ಫಾರಂ ನಂ. 53ರ ಸಂತ್ರಸ್ತ ರೈತರು ಹಾಗೂ ಅರಣ್ಯ ಇಲಾಖೆಯ 4/1 ನೋಟಿಫಿಕೇಶನ್ನಿಂದ ತೊಂದರೆಗೆ ಒಳಗಾಗಿರುವ ಎಲ್ಲಾ ರೈತ ಬಾಂಧವರು ಈ ಎರಡೂ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸೂಕ್ತ ಕಾನೂನು ಸಲಹೆ ಪಡೆದುಕೊಳ್ಳಬೇಕಾಗಿ ‘ರೈತ ಹಿತರಕ್ಷಣಾ ವೇದಿಕೆ, ಕಳಸ’ ಪ್ರಕಟಣೆಯಲ್ಲಿ ತಿಳಿಸಿದೆ.
