
ಕಳಸ ಲೈವ್ ವರದಿ
ಶ್ರೀ ಶಕ್ತಿಗಣಪತಿ ಪ್ರತಿಷ್ಠಾನದ ಕಟ್ಟಡದಲ್ಲಿ 68ನೇ ವರ್ಷದ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಕೆ. ಎಸ್. ಬಾಲಕೃಷ್ಣ ಅವರು, “ಈ ವರ್ಷ ನಮ್ಮ ಪ್ರತಿಷ್ಠಾನವು 68ನೇ ವರ್ಷದ ಸಂಭ್ರಮದಲ್ಲಿದ್ದು, ಈ ಪವಿತ್ರ ಸಂದರ್ಭದಲ್ಲಿ 7 ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು ಕೇವಲ ಉತ್ಸವಗಳಿಗೆ ಸೀಮಿತವಾಗದೆ, ಇತರೆ ದಿನಗಳಲ್ಲಿ ಸಮಾಜ ಸೇವೆ ಹಾಗೂ ಶಾಲೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೂಜಾಸಮಿತಿಯ ಕಾರ್ಯದರ್ಶಿ ಕೆ. ಜಿ. ರಾಜ್ಕುಮಾರ್ ಪೈ, ಪ್ರಮುಖರಾದ ಆನಂದ್ ಗುರೂಜಿ, ಗುರುವಪ್ಪ, ಎಲ್. ಅನಂತ ಸೇರಿದಂತೆ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು
